ಚಿಕ್ಕಮಗಳೂರು: ಮೋಜು-ಮಸ್ತಿಗೆಂದು ಹೊರಟಿದ್ದ ಅರಣ್ಯಾಧಿಕಾರಿಗಳನ್ನು ತಡೆದವರ ಮೇಲೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಡೆದಿದ್ದೇನು..?
ಸಂತವೇರಿಯಲ್ಲಿ 10ಕ್ಕೂ ಹೆಚ್ಚು ಸರ್ಕಾರಿ ಕಾರುಗಳನ್ನು ಸ್ಥಳೀಯರು ತಡೆದಿದ್ದರು. ಟ್ರೆಕ್ಕಿಂಗ್ಗೆಂದು ಹೊರಟಿದ್ದ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದಿದ್ದು, ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ನಮ್ಮ ಊರಿಗೆ ಬರಬೇಡಿ ಎಂದು ಘೇರಾವ್ ಹಾಕಿದ್ದರು.
ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿ ವಾಪಸು ಕಳುಹಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಕೆಮ್ಮಣ್ಣಗುಂಡಿಯತ್ತ ಅಧಿಕಾರಿಗಳು ಪ್ರಯಾಣಿಸಿದ್ದರು.
ಮಾಧ್ಯಮಗಳಲ್ಲಿ ಸುದ್ದಿ ಬಂದ ಹಿನ್ನೆಲೆ ಮುಜುಗರಕ್ಕೀಡಾದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರ ಮೇಲೆಯೇ ಕೇಸ್ ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸೇರಿದಂತೆ ಸಿಸಿಎಫ್, ಡಿಎಫ್ಓ ಭಾಗಿಯಾಗಿದ್ದರು.
ಓದಿ: ಸಂಕಷ್ಟದ ನಡುವೆ ಅಧಿಕಾರಿಗಳ ಮೋಜು, ಮಸ್ತಿ: ಕಾರು ತಡೆದು ಕ್ಲಾಸ್ ತೆಗೆದುಕೊಂಡ ಮಲೆನಾಡ ಜನರು..