ಚಿಕ್ಕಮಗಳೂರು: ಕಾನೂನು ಎಲ್ಲರಿಗಿಂತ ಸುಪ್ರೀಂ ಆಗಿದ್ದು, ಕಾನೂನಿಗೆ ಪ್ರತಿಯೊಬ್ಬರು ತಲೆ ಬಾಗಲೇಬೇಕು. ತಪ್ಪು ಮಾಡಿದ್ದರೆ ಕಾನೂನಿನ ಕ್ರಮ ಎದುರಿಸಲೇಬೇಕು ತಪ್ಪಾಗಿಲ್ಲದಿದ್ರೆ, ಅವರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದರು.
ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ದೆಹಲಿಯ ಇಡಿ ಕಚೇಯಲ್ಲಿ ವಿಚಾರಣೆ ಎದುರಿಸುತ್ತಿರುವ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ, ಜನಾರ್ದನ ರೆಡ್ಡಿಯನ್ನು ಬಂಧಿಸಿದಾಗ ನಾವು ಅವರನ್ನೂ ಸಮರ್ಥನೆ ಮಾಡಿಕೊಂಡಿರಲಿಲ್ಲ. ಜನಾರ್ದನ ರೆಡ್ಡಿಯವರನ್ನು ಬಿಜೆಪಿ ಎಂದೂ ಸಮರ್ಥನೆ ಮಾಡಿಕೊಂಡಿಲ್ಲ. ಅವರು ಕಾನೂನಿನಡಿ ಬಂಧನಕ್ಕೊಳಗಾಗಿ ಜೈಲುವಾಸವನ್ನು ಅನುಭವಿಸಿದ್ದಾರೆ ಎಂದರು.
ಡಿ ಕೆ ಶಿವಕುಮಾರ್ ತಪ್ಪೇ ಮಾಡಿಲ್ಲದಿದ್ದರೆ ಹೆದರುವ ಅವಶ್ಯಕತೆ ಇಲ್ಲ. ಬಿಜೆಪಿ ಯಾವುದನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಅವರು ಹೇಳಿದರು.