ETV Bharat / state

ಚಿಕ್ಕಮಗಳೂರಲ್ಲಿ ಮುಂದುವರೆದ ಕಾಡಾನೆ ದಾಳಿ: ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಹಿಡಿಶಾಪ - elephant attack in N R Pura

ಎನ್‌.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬಗೆರೆ, ಕುಂಬರಗೋಡು ಗ್ರಾಮದಲ್ಲಿ ಕಾಡಾನೆಯೊಂದು ನಿರಂತರ ದಾಳಿ ಮಾಡುತ್ತಿದ್ದು, ರೈತರ ಬೆಳೆ ಸಂಪೂರ್ಣ ನಾಶವಾಗಿದೆ.

elephant-attack-in-chikkamagalore
ಚಿಕ್ಕಮಗಳೂರಿನಲ್ಲಿ ಮುಂದುವರೆದ ಕಾಡಾನೆ ದಾಳಿ
author img

By

Published : Mar 9, 2021, 10:56 PM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ಬೇಸತ್ತಿರುವ ರೈತರು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

elephant-attack-in-chikkamagalore
ಪೈಪ್​ ತುಳಿದು ಹಾಳು ಮಾಡಿರುವುದು

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬಗೆರೆ, ಕುಂಬರಗೋಡು ಗ್ರಾಮದಲ್ಲಿ ಕಾಡಾನೆಯೊಂದು ನಿರಂತರ ದಾಳಿ ಮಾಡುತ್ತಿದ್ದು, ರೈತರ ಬೆಳೆ ಸಂಪೂರ್ಣ ನಾಶವಾಗಿದೆ.

ಕುಂಬರಗೋಡಿನ ಮಹಮ್ಮದ್ ಹನೀಫ್ ಎಂಬ ರೈತನ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆ ಕಾಫಿ, ಅಡಿಕೆ ಬೆಳೆ ನಾಶ ಮಾಡಿದೆ. ಜೊತೆಗೆ ನೀರಿನ ಪೈಪ್‌ಗಳನ್ನು ತುಳಿದು ಹಾಕಿದ್ದು, ಸಾಕಷ್ಟು ನಷ್ಟವನ್ನುಂಟು ಮಾಡಿದೆ.

ಇದನ್ನೂ ಓದಿ: ರಾಸುಗಳ ಶರವೇಗದ ಓಟ: ಸಖರಾಯಪಟ್ಟಣದಲ್ಲಿ ಧೂಳೆಬ್ಬಿಸಿದ ಜೋಡೆತ್ತಿನ ಗಾಡಿ ಸ್ಪರ್ಧೆ

ಕಳೆದೊಂದು ವಾರದಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡುತ್ತಿದ್ದರೂ, ಅರಣ್ಯ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿರುವ ಸ್ಥಳೀಯರು, ಕೂಡಲೇ ಆನೆಯನ್ನು ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.