ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ 'ಕಾಡು ಮನುಷ್ಯ' ಟ್ವೀಟ್ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
ನಾವ್ಯಾರು ಶತ್ರುಗಳಲ್ಲ, ರಾಜಕೀಯ ವಿರೋಧಿಗಳಷ್ಟೆ. ರಾಜಕೀಯ ಟೀಕೆ ವ್ಯಕ್ತಿಗತ ಅಸಹನೆ, ದ್ವೇಷಕ್ಕೆ ಬಳಕೆಯಾಗಬಾರದು. ಸಿದ್ದರಾಮಯ್ಯ ಬಳಸಿದ ಭಾಷೆ, ಪ್ರತಿಕ್ರಿಯಿಸಿದ ರೀತಿಯನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಬುದ್ಧಿ ಹೇಳುವಷ್ಟು ನಾವು ದೊಡ್ಡವರಲ್ಲ. ಬೀದಿಯಲ್ಲಿ ಜಗಳ ಆಡಿದ ರೀತಿಯಲ್ಲಿ ಭಾಷೆ ಬಳಸಿರುವುದು ಸೂಕ್ತವಲ್ಲ ಎಂದು ಹೇಳಿದರು.
-
ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ @nalinkateel ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ. 1/6
— Siddaramaiah (@siddaramaiah) October 22, 2020 " class="align-text-top noRightClick twitterSection" data="
">ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ @nalinkateel ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ. 1/6
— Siddaramaiah (@siddaramaiah) October 22, 2020ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ @nalinkateel ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ. 1/6
— Siddaramaiah (@siddaramaiah) October 22, 2020
ಬಿಹಾರ ಚುನಾವಣೆ ಪ್ರಣಾಳಿಕೆಯಲ್ಲಿ ಕೋವಿಡ್ ಲಸಿಕೆ ಉಚಿತ ನೀಡುವ ಬಿಜೆಪಿಯ ಭರವಸೆ ಕುರಿತು ಮಾತನಾಡಿ, ಉಚಿತ ಅಕ್ಕಿ ಕೊಡುತ್ತೇವೆ, ಲ್ಯಾಪ್ ಟಾಪ್ ಕೊಡುತ್ತೇವೆ ಅನ್ನುತ್ತಾರೆ. ಅದೇ ರೀತಿ ಉಚಿತ ಲಸಿಕೆ ಕೊಡುತ್ತೇವೆ ಅನ್ನೋದರಲ್ಲಿ ತಪ್ಪೇನಿದೆ..? ಜೀವ ಉಳಿಸಲು ನೆರವಾಗುವ ಕೆಲಸಕ್ಕೆ ಉಚಿತವಾಗಿ ಕೊಡುತ್ತೇವೆ ಅನ್ನೋದರಲ್ಲಿ ತಪ್ಪೇನಿದೆ..? ಆಯಷ್ಮಾನ್ ಭಾರತ್ ಜಗತ್ತಿನ ದೊಡ್ಡ ವಿಮಾ ಯೋಜನೆ. ಈ ಬಗ್ಗೆ ನಾವು ಭರವಸೆ ನೀಡಿದ್ದೆವು, ಅದೇ ರೀತಿ ಮಾಡಿದ್ದೇವೆ. ಬಿಹಾರದಲ್ಲಿ ಉಚಿತ ಲಸಿಕೆ ಕೋಡುತ್ತೇವೆ ಎಂದು ಹೇಳಿದ್ದೇವೆ. ಲಸಿಕೆ ಸಿಕ್ಕಾಗ ಉಚಿತವಾಗಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದರು.