ಚಿಕ್ಕಮಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಎರಡು ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.
ಆದರೆ, ಆ ನಿರ್ಧಾರ ವಾಪಸ್ ಪಡೆದು ಸಿಎಂ ಸೂಚನೆ ಮೇರೆಗೆ ಭಾನುವಾರದ ಕರ್ಫ್ಯೂ ತೆರವು ಮಾಡಲಾಗಿದೆ. ಈ ಭಾನುವಾರ ಚಿಕ್ಕಮಗಳೂರು ಜಿಲ್ಲೆ ಸಹಜ ಸ್ಥಿತಿಯಲ್ಲಿತ್ತು. ಇಂದು ಮುಂಜಾನೆಯಿಂದಲೇ ಜನ ರಸ್ತೆಗಿಳಿಯುವುದರ ಮೂಲಕ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ.
ನಗರದ ಐಜಿ ರಸ್ತೆ, ಎಂಜಿ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಪ್ರತಿ ಅಂಗಡಿ-ಮುಗ್ಗಟ್ಟುಗಳು ತೆರೆದಿವೆ. ಎಂದಿನಂತೆ ತಮ್ಮ ನಿತ್ಯದ ಕಾರ್ಯದಲ್ಲಿ ಜನ ತೊಡಗಿದ್ದಾರೆ. ಬೈಕ್ಗಳು, ಕಾರುಗಳು, ಆಟೋಗಳು ರಸ್ತೆಗಿಳಿದಿವೆ.
ಪ್ರಮುಖ ರಸ್ತೆಯಾದ ಎಂಜಿ ರಸ್ತೆಯಲ್ಲಿ ಜನರು ತುಂಬಿ ತುಳುಕುತ್ತಿದ್ದರು. ನಗರ ಪ್ರದೇಶಗಳಲ್ಲಿ ರಸ್ತೆ ಸಂಚಾರಕ್ಕೆ ಪೊಲೀಸರು ಸಂಪೂರ್ಣ ಅನುಕೂಲ ಕಲ್ಪಿಸಿದ್ದರು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಸಂಪೂರ್ಣ ತೆರವು ಮಾಡಲಾಗಿತ್ತು.