ಚಿಕ್ಕಮಗಳೂರು: ಜಿಲ್ಲೆಗೆ ಪ್ರವೇಶಿಸುವ ವಾಹನ ಸವಾರರು ಹಾಗೂ ವಾಹನಗಳನ್ನು ತೊಳೆದುಕೊಂಡು ಪ್ರವೇಶಿಸುವಂತೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ಸೂಚಿಸಿದ್ದಾರೆ.
![clean-the-vehicles-before-entry-the-district](https://etvbharatimages.akamaized.net/etvbharat/prod-images/6671817_875_6671817_1586086323021.png)
ಮಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಪೋಲಿಸರು ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ದೇಹಗಳ ಮೂಲಕ ಅಷ್ಟೇ ಅಲ್ಲದೇ ವಾಹನಗಳ ಮೂಲಕರು ರೋಗ ಹರಡುವ ಸಾಧ್ಯತೆಗಳಿದ್ದು, ಕೊರೊನಾ ತಡೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಇನ್ನೂ ತರಕಾರಿ ವಾಹನ, ತರ್ತು ವಾಹನಗಳು ಇದೇ ಸ್ವಚ್ಛತೆಯನ್ನು ಕಾಪಾಡುವಂತೆ ಬಣಕಲ್ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಟ್ಟಿಗೆಹಾರದ ಮೂಲಕ ಚಿಕ್ಕಮಗಳೂರುಗೆ ಪ್ರವೇಶಿಸುವ ವಾಹನಗಳು ಈ ಆದೇಶ ಪಾಲಿಸಬೇಕು ಎಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.