ಚಿಕ್ಕಮಗಳೂರು: ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ 19 ಕುಟುಂಬದ 28 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಪರಿಣಾಮ ಇಡೀ ಜಿಲ್ಲೆಗೆ ಜಿಲ್ಲೆಯೇ ಬೆಚ್ಚಿಬಿದ್ದಿದೆ.
ತಾಲೂಕಿನ ಉಳುವಾಗಿಲು ಗ್ರಾಮದ 28 ಜನ ತೋಟದ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದರಿಂದಾಗಿ ಮಲೆನಾಡಿಗರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ, ಸ್ಥಳಕ್ಕೆ ತಹಶೀಲ್ದಾರ್ ಕಾಂತರಾಜ್, ಶಾಸಕ ಕುಮಾರಸ್ವಾಮಿ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ.
ಮನೆಯಿಂದ ಯಾರೂ ಹೊರಬಾರದಂತೆ ಮನವಿ ಮಾಡಲಾಗಿದ್ದು, ಆರೋಗ್ಯ ಸಿಬ್ಬಂದಿಗೆ ನಿತ್ಯ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ಕೊರೊನಾ ಪಾಸಿಟಿವ್ ದೃಢವಾದ ಪ್ರತಿ ಕುಟುಂಬಕ್ಕೆ ಒಂದು ತಿಂಗಳ ಆಹಾರದ ಕಿಟ್ ನೀಡಲಾಗಿದ್ದು, ಆರೋಗ್ಯದ ಬಗ್ಗೆ ಜಾಗೃತರಾಗಿರುವಂತೆ ಮನವಿ ಮಾಡಲಾಗಿದೆ.
ಓದಿ: ಬುಟ್ಟಿ ಮಾರಲು ಅವಕಾಶ ಇಲ್ಲ: ಲಾಕ್ಡೌನ್ ನಿಯಮಕ್ಕೆ ಹಾಸನ ಬಡ ವ್ಯಾಪಾರಿಗಳು ಬಲಿ