ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ದೇವದಾನ ಗ್ರಾಮದಲ್ಲಿ ಹಸುವನ್ನ ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಭಜರಂಗದಳ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲೆಯ ವಿಜಯಗಿರಿ ಎಸ್ಟೇಟ್ಗೆ ಹೋಗುವ ಮಾರ್ಗ ಮಧ್ಯೆ ಹಸುವನ್ನ ಕೊಂದು ಮಾಂಸ ಮಾರಾಟಕ್ಕೆ ಈ ಆರೋಪಿಗಳು ಯತ್ನಿಸುತ್ತಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿರುವ ಭಜರಂಗದಳ ಕಾರ್ಯಕರ್ತರು ಆರೋಪಿಗಳನ್ನು ಹಿಡಿದು, ದನ ಕದಿಯುತ್ತೀರಾ? ಎಂದು ಕೋಲಿನಿಂದ ಹಲ್ಲೆ ಮಾಡಿ, ನಂತರ ಆಟೋ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ದೇವದಾನ ಸಮೀಪದ ಕಡ್ಲೆಮಕ್ಕಿ ಗ್ರಾಮದ ಇಬ್ರಾಹಿಂ ಹಾಗೂ ಷರೀಫ್ ಬಂಧಿತ ಆರೋಪಿಗಳಾಗಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಕಮಿಷನರ್ ಕಚೇರಿ ಎದುರು ಹೊತ್ತಿ ಉರಿದ ಕಾರು- ವಿಡಿಯೋ