ಚಿಕ್ಕಮಗಳೂರು: ಸುಮಾರು 15 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಜಿಲ್ಲೆಯ ಶೃಂಗೇರಿ ತಾಲೂಕಿನ ಹಳೇ ಕೊಪ್ಪ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.
ಹಳೇ ಕೊಪ್ಪ ಗ್ರಾಮದ ರಘು ಎಂಬುವರ ಮನೆಯ ಅಂಗಳದಲ್ಲಿದ್ದ ಮರಳು ಗುಡ್ಡೆಯಲ್ಲಿ ಕಾಳಿಂಗ ಸರ್ಪ ಅಡಗಿತ್ತು. ಇದನ್ನು ಕಂಡ ಮನೆ ಮಾಲೀಕ ಕೂಡಲೇ ಶೃಂಗೇರಿಯ ಉರಗ ತಜ್ಞ ಸ್ನೇಕ್ ಅರ್ಜುನ್ ಅವರಿಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಅರ್ಜುನ್, ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 15 ಅಡಿ ಉದ್ದದ ಬೃಹತ್ ಗ್ರಾಮದ ಕಾಳಿಂಗವನ್ನು ಸೆರೆ ಹಿಡಿದಿದ್ದಾರೆ.
ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಶೃಂಗೇರಿ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.