ಬಾಗೇಪಲ್ಲಿ(ಚಿಕ್ಕಬಳ್ಳಾಪುರ) : ತಾಲೂಕಿನ ಹೊರವಲಯದ ಗಡಿಭಾಗದಲ್ಲಿರುವ ಸುಂಕ ವಸೂಲಿ (ಟೋಲ್ ಪ್ಲಾಜಾ) ವ್ಯವಸ್ಥಾಪಕ ತನ್ನ ಸಿಬ್ಬಂದಿಗೆ ಅರ್ಧದಷ್ಟು ಮಾತ್ರ ವೇತನ ಪಾವತಿ ಮಾಡಿದ್ದು, ಈ ಹಿನ್ನೆಲೆ ಪ್ರತಿಭಟನೆ ನಡೆಸಲಾಗಿದೆ.
ಈ ವೇಳೆ ಸಿಐಟಿಯು ತಾಲೂಕು ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಎಲ್ಲಾ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯ ಸಂಸ್ಥೆಗಳು ತಮ್ಮ ಕೆಲಸಗಾರರನ್ನು ವಜಾಗೊಳಿಸುವುದು ಹಾಗೂ ಅವರ ವೇತನವನ್ನು ಕಡಿತಗೊಳಿಸಬಾರದೆಂದು ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಟೋಲ್ ಪ್ಲಾಜಾ ವ್ಯವಸ್ಥಾಪಕ ಕರ್ನಾಟಕ ಸರ್ಕಾರದ ಆದೇಶ ಗಾಳಿಗೆ ತೂರಿ ವೇತನವನ್ನು ಕಡಿತಗೊಳಿಸುವುದು ಖಂಡನೀಯ ಎಂದಿದ್ದಾರೆ.
ಪೊಲೀಸ್ ಮುಖ್ಯಪೇದೆ ಮುರಳಿ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಸುಂಕ ವಸೂಲಾತಿ ಕೇಂದ್ರದ ಮೇಲ್ವಿಚಾರಕರನ್ನು ಸ್ಥಳಕ್ಕೆ ಕರೆಯಿಸಿ ಪೂರ್ಣಪ್ರಮಾಣದ ವೇತನವನ್ನು ನೀಡಲು 7 ದಿನ ಕಾಲಾವಕಾಶ ಕೊಡಿಸಿದರು. ನಂತರ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.