ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ ಖಂಡಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರ ದಿಢಿರ್ ವರ್ಗಾವಣೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ 7 ಚದಲಪುರ ಗೇಟ್ ಬಳಿ ಕನ್ನಡಪರ, ರೈತಪರ, ಸಂಘಟನೆಗಳಿಂದ ಹೆದ್ದಾರಿಯನ್ನು ತಡೆದು ಕೂಡಲೇ ಜಿಲ್ಲಾಧಿಕಾರಿ ವರ್ಗಾವಣೆಯನ್ನು ರದ್ದುಪಡಿಸುವಂತೆ ಒತ್ತಾಯಿಸಲಾಯಿತು.
ಅನಿರುದ್ಧ್ ಅವರು ಕಳೆದ ವರ್ಷವಷ್ಟೇ ನಮ್ಮ ಜಿಲ್ಲೆಯಲ್ಲಿ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ವರ್ಷ ಕಳೆಯುವುದರೊಳಗಾಗಿ ಜಿಲ್ಲಾಧಿಕಾರಿಯನ್ನು ವರ್ಗಾಹಿಸಿರುವುದು ಜಿಲ್ಲೆಯ ಜನತೆಗೆ ಬೇಸರ ತರಿಸಿದೆ. ಜಿಲ್ಲೆಯಲ್ಲಿ ಅನಿರುದ್ಧ್ ಅವರು ಸಾಕಷ್ಟು ಅಭಿವೃದ್ಧಿಗೆ ಶ್ರಮಿಸಿದ್ರು. ಅಷ್ಟೇ ಅಲ್ಲದೆ ಸಾರ್ವಜನಿಕರ ಸಂಪರ್ಕಕ್ಕೂ ಸ್ಪಂದಿಸುವ ಮೂಲಕ ಜನರ ಮೆಚ್ಚುಗೆ ಪಡೆದಿದ್ರು.
ಇನ್ನು, ರಾಷ್ಟ್ರೀಯ ಹೆದ್ದಾರಿ 7 ಬಂದ್ ಮಾಡಿದ್ದರಿಂದ ವಾಹನ ಸವಾರರು ಕೆಲಕಾಲ ಪರದಾಟ ನಡೆಸುವಂತಾಯಿತು.