ಚಿಕ್ಕಬಳ್ಳಾಪುರ: ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರು ಕೆ.ಸಿ. ವ್ಯಾಲಿ ನೀರನ್ನು ಕುರುಟಹಳ್ಳಿ ಕೆರೆಗೆ ಹರಿಸಬೇಡಿ ಎಂದು ಹೇಳಿಲ್ಲ. ಆದರೆ. ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಸಿ. ವ್ಯಾಲಿಯ ನೀರು ಕುರುಟಹಳ್ಳಿ ಕೆರೆಗೆ ಹರಿದ ನಂತರ ಶಾಸಕರು ಭೇಟಿ ನೀಡಿ, ಕೆರೆ ಪರಿಶೀಲನೆ ಮಾಡಿದ್ದಾರೆ. ಮೊದಲು ಕೆರೆಯನ್ನು ಸ್ವಚ್ಛಗೊಳಿಸಿ ಕೆರೆಯಲ್ಲಿ ಹಲವಾರು ಜನರು ವಾಸವಾಗಿದ್ದಾರೆ. ಅವರನ್ನು ಕೂಡಲೇ ಬೇರೆ ಕಡೆ ಸ್ಥಳಾಂತರಿಸಿದ ಬಳಿಕ ಕೆರೆಗೆ ನೀರು ಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿನಹ ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಹೇಳಿಲ್ಲ ಎಂಬ ಸ್ಪಷ್ಟನೆ ನೀಡಿದರು.
ಕೆ.ಸಿ. ವ್ಯಾಲಿ ನೀರಿನ ವಿಚಾರದಲ್ಲಿ ಕೆಲವು ಮುಖಂಡರು ರಾಜಕೀಯ ಮಾಡುತ್ತಿದ್ದಾರೆ. ಶಾಸಕರ ಸೂಚನೆಯ ನಂತರ ಅಧಿಕಾರಿಗಳು ಕೆರೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಕೆಲವರು ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.
ಅಧಿಕಾರಿಗಳು ಅವರನ್ನು ಕೆರೆ ಒತ್ತುವರಿ ಜಾಗದಿಂದ ತೆರವುಗೊಳಿಸಬೇಕು. ಈ ಬಳಿಕವಷ್ಟೇ ನೀರು ಹರಿಸಲು ಮುಂದಾಗಬೇಕು ಎಂದು ಜೆಡಿಎಸ್ ಕಾರ್ಯಕರ್ತ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.