ಚಿಕ್ಕಬಳ್ಳಾಪುರ:- ವಿಶ್ವಾಸದಿಂದ ಇದ್ದ ಬೀದಿ ನಾಯಿಗೆ ನಗರದ 4 ನೇ ವಾರ್ಡಿನ ಎಡಿ ಕಾಲೋನಿಯ ಸ್ನೇಹಿತರ ಬಳಗ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎಂಬ ಮಾತಿದೆ. ಅದರಂತೆ ತನ್ನ ಒಳ್ಳೆಯ ನಡತೆಯಿಂದ ವಾರ್ಡ್‌ನ ಜನತೆಯ ಮನೆ ಮಾತಾಗಿರುವ ನಾಯಿಗೆ ತನ್ನ ಹುಟ್ಟುಹಬ್ಬದ ಪ್ರಯುಕ್ತ ರಾಜಕೀಯ ನಾಯಕರಿಗೆ ಸನ್ಮಾನ ಮಾಡುವಂತೆ ಶಾಲು ಹೊದಿಸಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ವರ್ಷದ ಹಿಂದೆ ನಗರದ 4 ನೇ ವಾರ್ಡ್‌ನ ದೇವಸ್ಥಾನದಲ್ಲಿ ನಾಯಿಯನ್ನು ತಂದು ಬಿಡಲಾಗಿತ್ತು. ಅದರಂತೆ ವಾರ್ಡ್‌ನ ಜನತೆಯೊಂದಿಗೆ ಸ್ನೇಹದಿಂದ ನಿಯತ್ತಾಗಿ ನಡೆದುಕೊಳ್ಳುತ್ತಿತ್ತು. ಇದರಿಂದ ನಾಯಿಗೆ ಶೇರ್ ಖಾನ್ ಎಂದು ಹೆಸರಿಟ್ಟು ಕರೆಯುತ್ತಿದ್ದರು. ಇನ್ನೂ ನಾಯಿಯನ್ನು ತಂದ ನೆನಪಿಗಾಗಿ ಕೇಕ್ ಮೇಲೆ ನಾಯಿಯ ಚಿತ್ರವನ್ನು ಬಿಡಿಸಿ ಕತ್ತರಿಸುವ ಮೂಲಕ ವಾರ್ಡ್ ಗುಂಪು ಸಂಭ್ರಮಿಸಿದ್ದಾರೆ.
ಈ ಶೇರ್ ಖಾನ್ ಸಾಕಷ್ಟು ಬಾರೀ ದೇವಸ್ಥಾನದಲ್ಲಿ ಕಳ್ಳರ ಹಾವಳಿ ಸೇರಿದಂತೆ ವಾರ್ಡ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಟ ಕಾಣಿಸಿಕೊಂಡಲ್ಲಿ ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿ ತನ್ನ ನಿಯತ್ತನ್ನು ತೋರಿಸುತ್ತಿತ್ತು. ಇದರ ಸಲುವಾಗಿಯೇ ವಾರ್ಡಿನ ಜನತೆ ಪ್ರತಿನಿತ್ಯ ಈ ನಾಯಿ ಊಟವನ್ನು ಹಾಕಿ, ಮನೆ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ: 22 ಗಂಟೆಯೊಳಗೆ ಮೌಂಟ್ ತುಳಿಯನ್ ಶಿಖರ ಏರಿಳಿದು ಸಾಧನೆಗೈದ ಚಿಕ್ಕಬಳ್ಳಾಪುರದ ಸಾಹಸಿಗರು