ಚಿಕ್ಕಬಳ್ಳಾಫುರ: ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾದ ಹಿನ್ನೆಲೆ ಗ್ರಾಮಸ್ಥರೆಲ್ಲಾ ಮನೆಯಿಂದ ಹೊರ ಬಂದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ನಸುಕಿನ ಜಾವ ಭೂಮಿಯಲ್ಲಿ ದೊಡ್ಡ ಶಬ್ದವೊಂದು ಕೇಳಿಸಿದ್ದು, ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬೀಳಲಾರಂಭಿಸಿದವು. ಇದರಿಂದ ಆತಂಕಗೊಂಡ ಮಿಟ್ಟಹಳ್ಳಿ, ನಂದನವನ, ಅಪ್ಸನಹಳ್ಳಿ,ಗೋನೇನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ.
ಕಳೆದ ದಿನ ರಾತ್ರಿ 10 ಗಂಟೆ ಸುಮಾರಿಗೆ ಒಂದು ಬಾರಿ ಭೂಮಿ ಕಂಪಿಸಿದ್ದು, ಭಯದಲ್ಲೇ ಗ್ರಾಮಸ್ಥರು ಮನೆ ಸೇರಿಕೊಂಡಿದ್ದರು. ತದ ನಂತರ ಇಂದು ಮುಂಜಾನೆ 5 ಗಂಟೆಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.