ಚಿಕ್ಕಬಳ್ಳಾಪುರ: ಕಾಲೇಜು ಮುಗಿಸಿ ಮನೆಗಳಿಗೆ ಹೊರಟಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಪುಂಡನೊಬ್ಬ ಕಿರುಕುಳು ನೀಡಲು ಮುಂದಾಗಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಮಾರುತಿ ಸರ್ಕಲ್ ನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದ ನಿವಾಸಿ ಶಿವು ಎಂಬುವವ ಜ್ಯೂಸ್ ಬಾಟಲಿಯೊಂದನ್ನು ಹಿಡಿದುಕೊಂಡು ಕಾಲೇಜು ಯುವತಿಯರ ಮೇಲೆ ಎರಚಲು ಪ್ರಯತ್ನಿಸುತಿದ್ದ ಎನ್ನಲಾಗಿದೆ. ಇನ್ನು ಈ ಜ್ಯೂಸ್ನಲ್ಲಿ ಯಾವುದೋ ಮೂರ್ಚೆ ಬರುವ ಔಷಧ ಇತ್ತು ಎಂದು ಹೇಳಲಾಗುತ್ತಿದೆ. ಕಾರಣ ಈತ ಯುವತಿಯರ ಮೇಲೆ ಸ್ಪ್ರೇ ಮಾಡಿದಾಗ ಅವರ ಕಣ್ಣುಗಳಲ್ಲಿ ಉರಿಯಾಗಿದೆಯಂತೆ.
ಈತನ ವರ್ತನೆಗೆ ಭಯಭೀತರಾದ ವಿದ್ಯಾರ್ಥಿನಿಯರು ಗಾಬರಿಗೊಂಡು ಕಿರುಚಾಡಿದ್ದಾರೆ. ತಕ್ಷಣ ಎಚ್ಚೆತ್ತ ಸಾರ್ವಜನಿಕರು ಪುಂಡನಿಗೆ ಹಿಗ್ಗಾ ಮುಗ್ಗಾ ಥಳಿಸಿ ಚಿಂತಾಮಣಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಬಗ್ಗೆ ಪೊಲೀಸರಿಗೆ ಅನುಮಾನಗಳಿದ್ದು, ಈತ ಬುದ್ದಿಮಾಂದ್ಯನಾಗಿದ್ದಾನೆಯೇ? ಅಥವಾ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದಾನೆಯೇ ಅನ್ನೋದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಇದನ್ನೂ ಓದಿ: ರಾಜ ಚೋಳ-1 ವಂಶಸ್ಥರ ದೇವಾಲಯದ ಕುರುಹು ನಾಪತ್ತೆ: ತ. ನಾಡು ಸರ್ಕಾರಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಪತ್ರ