ETV Bharat / state

ನೆರೆ ಪರಿಹಾರಕ್ಕೆ ಹಣವಿಲ್ಲವೆಂದು ನಾವು ಹೇಳಿಲ್ಲ: ಸಚಿವ ಸಿ.ಟಿ. ರವಿ

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಪಡೆದು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

ಸಿ.ಟಿ ರವಿ ಹೇಳಿಕೆ
author img

By

Published : Oct 4, 2019, 11:25 PM IST

ಚಿಕ್ಕಬಳ್ಳಾಪುರ : ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಪಡೆದು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.

ಸಿ.ಟಿ ರವಿ ಹೇಳಿಕೆ

ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಆದ್ರೆ ಎಲ್ಲ ರಾಜ್ಯಗಳಿಗೆ ನೀಡುವಾಗ ನಮಗೂ ಪರಿಹಾರ ಸಿಗುತ್ತದೆ. ನೆರೆ ಪರಿಹಾರಕ್ಕೆ ಹಣವಿಲ್ಲವೆಂದು ನಾವು ಹೇಳಿಲ್ಲ. ಹಣವಿಲ್ಲದಿದ್ರೆ ಆಶಾಕಾರ್ಯಕರ್ತೆಯರಿಗೆ ಮಾಸಾಶನವನ್ನು ಏರಿಕೆ ಮಾಡಲು ಸಾಧ್ಯವೇ? ಒಟ್ಟು 11 ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದ್ದು, ಯಾವ ರಾಜ್ಯಕ್ಕೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಎಲ್ಲ ರಾಜ್ಯಗಳಿಗೂ ಹಣ ಬಿಡುಗಡೆ ಮಾಡುವಾಗ ನಮ್ಮ ರಾಜ್ಯಕ್ಕೂ ಸಿಗಲಿದೆ. ಇನ್ನೂ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ತಿಳಿಸಿದರು.

ರಾಜಕಾರಣದಲ್ಲಿ ಅವರ ಯೋಗ್ಯತೆ ಏನು ಎಂಬುವುದನ್ನು ಜನರೇ ಹೇಳಿದ್ದಾರೆ. ಆದರೆ ಅವರ ಚಲನಚಿತ್ರದ ಯೋಗ್ಯತೆ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜಕೀಯ ಯೋಗ್ಯತೆಗೆ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಮ್ಮ ಪಕ್ಷದ ರಾಜಕೀಯ ಯೋಗ್ಯತೆಗೆ ನಮಗೂ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಪ್ರಕಾಶ್​ ರೈ ಗೆ ತಿರುಗೇಟು ನೀಡಿದರು.

Intro:ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಸಿಟಿ ರವಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಪಡೆದು ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನತೆ ಸಂಕಷ್ಟದಲ್ಲಿದ್ದು ಇನ್ನೂ ಕೇಂದ್ರ ಸರ್ಕಾರ ಪರಿಹಾರ ಧನವನ್ನು ಬಿಡುಗಡೆ ಮಾಡದ ಕಾರಣ ಸಾಕಷ್ಟು ವಿರೋಧಗಳು ವ್ಯಕ್ತಪಡಿಸುತ್ತಿದ್ದು, ಮುಖ್ಯಮಂತ್ರಿಗಳಿಗೂ ಗೇರಾವ್ ಹಾಕಲಾಗಿತ್ತು ಆದ್ರೆ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಹಣವಿದೆ.ಆದ್ರೆ ಎಲ್ಲಾ ರಾಜ್ಯಗಳಿಗೂ ನೀಡುವಾಗ ನಮಗೂ ಸಿಗತ್ತದೆಂದು ಸಮರ್ಥಿಸಿಕೊಂಡಿದ್ದಾರೆ.

Body:ನೆನ್ನೆಯಷ್ಟೇ ನೇಕಾರರ ವಿಷಯಕ್ಕೆ ಸಂಬಂಧಿಸಿದಂತೆ ಹಣ ಕೇಳಿದಾಗ ಈಗ ಎಲ್ಲಿದ್ದೀಯಪ್ಪ ಹಣ ಎಂದು ಹೇಳಿದ್ದಾರೆ.ನೆರೆಪರಿಹಾರಕ್ಕೆ ಹಣವಿಲ್ಲವೆಂದು ನಾವು ಹೇಳಿಲ್ಲಾ.ಹಣವಿಲ್ಲಾವಾದ್ರೆ ಆಶಾಕಾರ್ಯಕರ್ತೆಯರಿಗೆ ಮಾಸಾಶಸನವನ್ನು ಏರಿಕೆ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಕೇಳಿದ್ದಾರೆ.ಕೇಂದ್ರದಲ್ಲಿ 11 ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದ್ದು ಯಾವ ರಾಜ್ಯಕ್ಕೂ ಇನ್ನೂ ಹಣ ಬಿಡುಗಡೆಯಾಗಿಲ್ಲಾ ಎಲ್ಲಾ ರಾಜ್ಯಗಳಿಗೂ ಹಣ ಬಿಡುಗಡೆ ಮಾಡುವಾಗ ನಮ್ಮ ರಾಜ್ಯಕ್ಕೂ ಸಿಗಲಿದೆ. ಇನ್ನೂ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ರಾಜ್ಯಕ್ಕೆ ಅನ್ಯಾಯ ಮಾಡುವುದಿಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೂ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಹಣವಿಲ್ಲವೆಂದು ಹೇಳಿಕೆ ನೀಡಿಲ್ಲಾ.ಆದರೆ ಮಾಧ್ಯಮಗಳು ಟಿಆರ್ಪಿ ಗೋಸ್ಕರ ಜನರಲ್ಲಿ ಗೊಂದಲ ಏರ್ಪಡಿಸಿದ್ದಾರೆ. ಸದ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಭಯ ಪಡುವ ಅಗತ್ಯವಿಲ್ಲಾ.ಸೋನಿಯಾ ಗಾಂಧಿ ಅವರ ಆಡಳಿತದಲ್ಲಿ ಪ್ರಧಾನಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲಾ.ಆದರೆ ನಮ್ಮ ಪ್ರಧಾನಮಂತ್ರಿ 24/7 ದಿನವು ಸಂಪರ್ಕದಲ್ಲಿರುತ್ತಾರೆ.ಒಂದು ವೇಳೆ ಒಂದು ರಾಜ್ಯಕ್ಕೆ ಪರಿಹಾರ ಕೊಟ್ಟು ನಮ್ಮ ರಾಜ್ಯಕ್ಕೆ ಪರಿಹಾರ ನೀಡದಿದ್ದರೆ ರಾಜ್ಯದ ಹಿತಸಕ್ತಿಯನ್ನು ಕಾಪಾಡುವುದು ನಮಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ಪ್ರಕಾಶ್ ರೈ ಗೆ ಬೆಂಗಳೂರಿನ ಜನರು ಉತ್ತರ ನೀಡಿದ್ದಾರೆ ನಾನು ಹೇಳುವ ಅವಶ್ಯಕತೆ ಇಲ್ಲಾ...

ಇನ್ನೂ ಕೇಂದ್ರ ಸರ್ಕಾರದ ಬಗ್ಗೆ ಕಿಡಿಕಾರಿದ್ದ ನಟ ಹಾಗೂ ರಾಜಕಾರಣಿ ಪ್ರಕಾಶ್ ರೈ ಬಗ್ಗೆ ಸಿಟಿ ರವಿ ಕಿಡಿಕಾರಿದ್ದಾರೆ.ರಾಜಕಾರಣದಲ್ಲಿ ಅವರ ಯೋಗ್ಯತೆ ಏನು ಎಂಬುವುದನ್ನು ಜನರೇ ಹೇಳಿದ್ದಾರೆ.ಆದರೆ ಅವರ ಚಲನ ಚಿತ್ರದ ಯೋಗ್ಯತೆ ಬಗ್ಗೆ ನಾನು ಮಾತನಾಡುವುದಿಲ್ಲಾ,ಆದರೆ ರಾಜಕೀಯ ಯೋಗ್ಯತೆಗೆ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ.ನಮ್ಮ ಪಕ್ಷದ ರಾಜಕೀಯ ಯೋಗ್ಯತೆಗೆ ನಮಗೂ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಉತ್ತರ ನೀಡಿದ್ದಾರೆ.

ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 13 ಪ್ರವಾಸಿ ತಾಣಗಳನ್ನು ರಾಜ್ಯ ಸರ್ಕಾರ ಗುರ್ತಿಸಿದ್ದು ,ಜಿಲ್ಲಾಡಳಿತ 50 ಪ್ರಾವಾಸಿ ತಾಣಗಳನ್ನು ಗುರ್ತಿಸಿದೆ.ಸಿಲಿಕಾನ್ ಸಿಟಿ ಬಹಳ ಹತ್ತಿರದಲ್ಲಿರುವುದರಿಂದ ಸಾಕಷ್ಟು ಅಭಿವೃದ್ಧಿ ಮಾಡಲು ಶ್ರಮಿಸಲಾಗುವುದು,ಅದೇ ರೀತಿ 2020 ರ ವೇಳೆಗೆ ನ್ಯೂ ಟ್ಯೂರಿಸಂ ಪಾಲಿಸಿ ತರಲಾಗುವುದು ಅದರಲ್ಲಿ ಹೆರಿಟೇಜ್, ವಿಲೇಜ್,ಕೊಸ್ಟರ್ಲ್,ಟೆಂಪಲ್ ಟೂರಿಂಸಂ ಮಾಡಲಾಗುವುದು ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ಇನ್ನೂ ಸಭೆಯಲ್ಲಿ ಚಿಂತಾಮಣಿ ಕ್ಷೇತ್ರದ ಶಾಸಕ ಎಂ ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ, ಸಿಇಓ, ಸೇರಿದಂತೆ ಜಿಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.