ಚಿಕ್ಕಬಳ್ಳಾಪುರ: ಜವಳಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ದ ದಂಪತಿಗಳನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಪದ್ಮಾವತಮ್ಮ(60) ಡಿ. ವಿ ಶ್ರೀನಿವಾಸಲು(70) ದಂಪತಿಗಳು ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ನಗರದಲ್ಲಿ ಕೊಲೆ ನಡೆದಿದ್ದು, ನಗರದ ಜನತೆ ಬೆಚ್ಚಿಬಿದ್ದಿದ್ದರು.
ನಗರದ ವಾಸವಿ ಕಲ್ಯಾಣ ಮಂಟಪದ ಹಿಂಭಾಗ ವಾಸವಿದ್ದ ವೃದ್ದ ದಂಪತಿಗಳು ಸ್ವಂತ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಇನ್ನೂ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿದ್ದ ದಂಪತಿಗಳು ಜವಳಿ ಅಂಗಡಿಯನ್ನು ಮಾಡಿಕೊಂಡಿದ್ದರು.
ಕಳೆದ ರಾತ್ರಿ ಮಲಗಿದ್ದ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ರಕ್ತ ಸ್ರಾವದಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಮೂರು ರೀತಿಯ ಅನುಮಾನಗಳು ವ್ಯಕ್ತವಾಗಿದ್ದು, ಆರೋಪಿಗಳ ಬಲೆಗೆ ನಾಲ್ಕು ತಂಡಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ನಗರಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಶುರು ಮಾಡಿದ್ದಾರೆ.
ಓದಿ: ಕೇಸರಿ ಶಾಲು ಹಂಚಿಕೆ ಹೇಳಿಕೆ: ಸಾಕ್ಷಿ ಸಮೇತ ಡಿಕೆಶಿ ಜನತೆ ಮುಂದೆ ಇಡಲಿ ಎಂದ ಹೆಚ್ಡಿಕೆ