ಗೌರಿಬಿದನೂರು: ಕೊರೊನಾ ವೈರಸ್ ಹರಡದಂತೆ ತಡೆಯಲು ಹಲವು ಕ್ರಮ ಕೈಗೊಳ್ಳಲಾಗ್ತಿದೆ. ಅದರಂತೆ ಗೌರಿಬಿದನೂರಿನಲ್ಲಿ ವಿನೂತನವಾಗಿ ಸುರಂಗದಲ್ಲಿ ಔಷಧ ಸಿಂಪಡಿಸುವ ನೂತನ ವ್ಯವಸ್ಥೆ ಜಾರಿ ಮಾಡಲಾಗಿದೆ.
ವೈರಸ್ ನಿರೋಧಕ ಔಷಧ ಸಿಂಪಡಣೆಯಾಗುವಂತ ವ್ಯವಸ್ಥೆ ಇದಾಗಿದ್ದು, ಜಿಲ್ಲಾಧಿಕಾರಿ ಆರ್.ಲತಾ. ಸಿಇಒ ಪೌಜೀಯಾ ತರುನಮ್, ಎಸ್ಪಿ ಮಿಥುನ್ ಕುಮಾರ್, ಗೌರಿಬಿದನೂರು ಶಾಸಕ ಎನ್. ಹೆಚ್.ಶಿವಶಂಕರ ರೆಡ್ಡಿ ವೈರಸ್ ಮುಕ್ತ ಸುರಂಗಕ್ಕೆ ಚಾಲನೆ ನೀಡಿದರು.
ಡಿಸಿ,ಎಸ್ಪಿ, ಸಿಇಒ ಹಾಗೂ ಶಾಸಕರು ವೈರಸ್ ನಿರೋಧಕ ಸುರಂಗದಲ್ಲಿ ತೆರಳಿ ಪರೀಕ್ಷೆ ಮಾಡಿ ಸುರಂಗದ ಮೂಲಕವೇ ಜನರು ಓಡಾಡುವಂತೆ ಮನವಿ ಮಾಡಿಕೊಂಡರು.