ETV Bharat / state

ಹಳೇ ಸರ್ಕಾರಿ ಕಚೇರಿಗೆ ಹೊಸ ರೂಪ.. ಚಿಂತಾಮಣಿ ಕ್ಷೇತ್ರ ಶಿಕ್ಷಾಣಾಧಿಕಾರಿ ಕೈಚಳಕ - ಚಿಂತಾಮಣಿ ಚಿಕ್ಕಬಳ್ಳಾಪುರ ಲೇಟೆಸ್ಟ್ ನ್ಯೂಸ್

ಚಿಂತಾಮಣಿ ನಗರದ ಹೃದಯ ಭಾಗದಲ್ಲಿರುವ ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿಯು ಅವ್ಯವ್ಯಸ್ಥೆಯಿಂದ ಕೂಡಿತ್ತು. ಕಳೆದ ವರ್ಷ ಇಲ್ಲಿಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಗೌಡ ತಮ್ಮ ಕಚೇರಿಗೆ ಹೊಸ ರೂಪ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಉತ್ತಮ, ಹಸಿರುಮಯ ವಾತಾವರಣ ನಿರ್ಮಾಣವಾಗಿದೆ.

Chintamani education officer gave a new form to the old government office
ಹಳೇ ಸರ್ಕಾರಿ ಕಚೇರಿಗೆ ಹೊಸ ರೂಪ
author img

By

Published : Jul 11, 2021, 7:07 AM IST

Updated : Jul 11, 2021, 7:21 AM IST

ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯುವಂತಹ ಪರಿಸರ, ಸುತ್ತಲು ಕವಿರತ್ನ ಕಣ್ಮಣಿಗಳು, ಭಕ್ತಿ ಸಾರೋ ದೇಶಭಕ್ತರು‌ ಭಾವಚಿತ್ರಗಳು, ಇಂಥಹ ಉತ್ತಮ ವಾತಾವರಣ ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ನಗರದ ಹೃದಯ ಭಾಗದಲ್ಲಿರುವ ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿಯ ಬಳಿ ಕಾಣಸಿಗುತ್ತಿದೆ. ಇಲ್ಲಿನ ಕ್ಷೇತ್ರ ಶಿಕ್ಷಾಧಿಕಾರಿಗಳ ಪರಿಸರ ಕಾಳಜಿಯೇ ಈ ಸುಂದರ ವಾತಾವರಣಕ್ಕೆ ಕಾರಣವಾಗಿದೆ.

ಕಳೆದ ವರ್ಷವಷ್ಟೇ ಚಿಂತಾಮಣಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿದ ಅಧಿಕಾರಿ ಸುರೇಶ್ ಗೌಡ ತಮ್ಮ ಕಚೇರಿಗೆ ಹೊಸ ರೂಪ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇ ಸರ್ಕಾರಿ ಕಚೇರಿಗೆ ಹೊಸ ರೂಪ

1909ರ ಕಾಲದ ಬ್ರಿಟಿಷ್​​ ಆಡಳಿತದಲ್ಲಿ ನಿರ್ಮಾಣವಾದ ಕಟ್ಟಡ ಮೊದಲು ಬಾಲಕಿಯರ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡಿತ್ತು. ತದ ನಂತರ ಶಾಲೆಯನ್ನು ನಿಲ್ಲಿಸಲಾಗಿದ್ದು, ಸ್ವಂತ ಕಟ್ಟಡವೇ ಇಲ್ಲದ ಶಿಕ್ಷಾಣಾಧಿಕಾರಿಗಳ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಆದರೆ ಕಟ್ಟಡ ಸಾರ್ವಜನಿಕರ ಅವ್ಯವಹಾರದ ಕಟ್ಟಡವಾಗಿ ಮಾರ್ಪಟಿತ್ತು. ಇದನ್ನೆಲ್ಲ ಅರಿತ ನೂತನ ಶಿಕ್ಷಣಾಧಿಕಾರಿ ಸುರೇಶ್ ಗೌಡ ಕೊರೊನಾ ಸಂಕಷ್ಟದ ನಡುವೆ ಸಮಯವನ್ನು ಉಪಯೋಗಿಸಿಕೊಂಡು ಹಳೆಯ ಕಟ್ಟಡಕ್ಕೆ ಸುಣ್ಣಬಣ್ಣಗಳನ್ನು ಬಳಿಸಿ, ಕಟ್ಟಡದಲ್ಲಿದ್ದ ಖಾಲಿ ಜಾಗವನ್ನು ಹಸಿರುಮಯ ಮಾಡುವಲ್ಲಿ ಯಶಸ್ವಿಯಾಗಿದ್ದು, ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಲ್ಲಿ ಶುಚಿತ್ವ ಕೊರತೆಯೊಂದಿಗೆ, ಶೌಚಾಲಯವು ಇಲ್ಲದೇ ಪರದಾಡುವಂತಿದ್ದ ಕಟ್ಟಡವನ್ನು ತಾಲೂಕಿನ ಅಧಿಕಾರಿಗಳ ಆಶ್ರಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಪಾಳುಬಿದ್ದಿದ್ದ 60 ದಶಕಗಳ ಹಳೆಯ ಸರಸ್ವತಿ ವಿಗ್ರಹಕ್ಕೆ ಮರುಜೀವ ಕೊಡಲಾಗಿದೆ. ಕಚೇರಿಯ ಆವರಣದಲ್ಲಿ ಮಾವು, ನೇರಳೆ, ತೆಂಗು, ಹೊಂಗೆ, ನೆಲ್ಲಿಕಾಯಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜಾತಿಯ ಮರ-ಗಿಡಗಳ ಪೋಷಣೆಗೆ ಮುಂದಾಗಿದ್ದಾರೆ. ನಾಮಫಲಕವು ಇಲ್ಲದೇ ಇದ್ದ ಕಟ್ಟಡಕ್ಕೆ ಮರುಜೀವ ತುಂಬಿ ನೋಡಗರ ಕಣ್ಮನ ಸೆಳೆಯುವಲ್ಲಿ ಅಧಿಕಾರಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದಯವಿಟ್ಟು ವ್ಯಾಕ್ಸಿನ್ ಪಡೆಯಿರಿ, ಉಡುಗೊರೆ ಕೊಡ್ತೀವಿ ಅನ್ತಿದೆ ಬಿಬಿಎಂಪಿ!

Last Updated : Jul 11, 2021, 7:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.