ETV Bharat / state

ಚಿಕ್ಕಬಳ್ಳಾಪುರ: 46 ಸೋಂಕಿತರು ಪತ್ತೆ: 35 ಜನ ಗುಣಮುಖ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 35 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 46 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 42 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆ
author img

By

Published : Aug 9, 2020, 8:30 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 46 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 35 ಜನ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ 24, ಚಿಂತಾಮಣಿ 4, ಗೌರಿಬಿದನೂರು 4, ಬಾಗೇಪಲ್ಲಿ 8, ಶಿಡ್ಲಘಟ್ಟದಲ್ಲಿ 6 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಬ್ಬರಿಗೆ ಟ್ರಾವೆಲ್ ಮಾಡಿದ್ದರಿಂದ ಹಾಗೂ ಉಳಿದ 45 ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ.

ಚಿಂತಾಮಣಿ 10, ಚಿಕ್ಕಬಳ್ಳಾಪುರ 3, ಗೌರಿಬಿದನೂರು 10, ಶಿಡ್ಲಘಟ್ಟ 5, ಬಾಗೇಪಲ್ಲಿ 1 ಹಾಗೂ ಗುಡಿಬಂಡೆ‌ ವ್ಯಾಪ್ತಿಯಲ್ಲಿ 6 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 968 ಸಕ್ರಿಯ ಸೋಂಕಿತರಿಗೆ ಹೋಮ್​ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್‌‌ಗಳಲ್ಲಿ‌ ಹಾಗೂ ಜಿಲ್ಲಾ ಕೋವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ದಾಖಲೆ ಸಂಖ್ಯೆಯಲ್ಲಿ ಸುಮಾರು 50,825 ಜನ ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದುವರೆಗೆ 42 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.