ETV Bharat / state

ಒಂದೂವರೆ ತಿಂಗಳಲ್ಲೇ ಮಲೆ ಮಹದೇಶ್ವರನ ಹುಂಡಿಯಲ್ಲಿ 2.57 ಕೋಟಿ ಸಂಗ್ರಹ: ಚಿನ್ನ, ಬೆಳ್ಳಿಯ ಕಾಣಿಕೆ

ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿ ಆದಾಯ ಬಂದಿದೆ.

author img

By

Published : May 14, 2022, 4:02 PM IST

two-and-half-crore-hundi-collection-at-male-mahadeshwara-hills-temple
ಮಲೆಮಹದೇಶ್ವರನ ಹುಂಡಿ ಎಣಿಕೆ

ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ತಡರಾತ್ರಿವರೆಗೆ ನಡೆದಿದ್ದು, ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿ ಸಂಗ್ರಹವಾಗಿದೆ.

ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆದಿದೆ. ಕೇವಲ 34 ದಿನಗಳಲ್ಲಿ 2,57,25,859 ನಗದು ಸಂಗ್ರಹವಾಗಿದೆ. ಇದರೊಟ್ಟಿಗೆ, 127 ಗ್ರಾಂ ಚಿನ್ನ, 3,447 ಗ್ರಾಂ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಹದೇಶ್ವರನಿಗೆ ಅರ್ಪಿಸಿದ್ದಾರೆ.

ನಿತ್ಯದ ವಿವಿಧ ಸೇವಗಳನ್ನು ಹೊರತುಪಡಿಸಿ ಹುಂಡಿಯಲ್ಲೇ ಎರಡೂವರೆ ಕೋಟಿ ರೂ. ಆದಾಯ ಬಂದಿದೆ. ಕೊರೊನಾ ಬಳಿಕ ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿದೆ. ವಾರಾಂತ್ಯ ಹಾಗೂ ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕಿರಿದು ಭಕ್ತರು ಸೇರುತ್ತಿದ್ದಾರೆ.

ಇದನ್ನೂ ಓದಿ: ಸೌಹಾರ್ದತೆ ಸಾರುವ ಶಿರಸಿಯ ಸ್ವರ್ಣವಲ್ಲಿ ಮಠ: ಮುಸ್ಲಿಂರು ರಥ ಕಟ್ಟಿದರೆ, ಕ್ರಿಶ್ಚಿಯನ್​ರಿಂದ ಪಟಾಕಿ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.