ETV Bharat / state

ಕೊಚ್ಚಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಚಾಮರಾಜನಗರ ಗಡಿಯಲ್ಲಿ ತುರ್ತು ಭೂಸ್ಪರ್ಶ! - ಚಾಮರಾಜನಗರ ಗಡಿಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್​​​​ವೊಂದು ಪ್ರತಿಕೂಲ ಹವಾಮಾನದಿಂದಾಗಿ ಚಾಮರಾಜನಗರ ಗಡಿಭಾಗದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

helicopter
ಕೊಚ್ಚಿಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಚಾಮರಾಜನಗರ ಗಡಿಯಲ್ಲಿ ತುರ್ತು ಭೂಸ್ಪರ್ಶ
author img

By

Published : Jan 8, 2022, 2:15 PM IST

ಚಾಮರಾಜನಗರ: ಪ್ರತಿಕೂಲ ಹವಾಮಾನದಿಂದಾಗಿ ಕೊಚ್ಚಿಗೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್​​ವೊಂದು ಚಾಮರಾಜನಗರ ಗಡಿಭಾಗವಾದ ಸತ್ಯಮಂಗಲಂನ ಕಡಂಬೂರ್ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸಿಎಸ್ ಏವಿಯೇಷನ್‌ ಎಂಬ ಕಂಪನಿಗೆ ಸೇರಿದ ಹೆಲಿಕಾಪ್ಟರ್​​ನಲ್ಲಿ ಬೆಂಗಳೂರಿನ ಭರತ್, ಶೀಲಾ ಭರತ್, ಹೆಲಿಕಾಪ್ಟರ್ ಇಂಜಿನಿಯರ್ ಅಂಕಿತ್ ಸಿಂಗ್, ಪೈಲಟ್- ಜಸ್ಪಾಲ್ ಎಂಬವರಿದ್ದರು. ಬೆಂಗಳೂರಿನಿಂದ ಕೊಚ್ಚಿ ಆಸ್ಪತ್ರೆಯೊಂದಕ್ಕೆ ತೆರಳುವಾಗ ಪ್ರತಿಕೂಲ ಹವಾಮಾನದಿಂದಾಗಿ ಕಡಂಬೂರಿನ ಜಮೀನೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ನಿರ್ಮಾಣ ಹಂತದ ಅಪಾರ್ಟ್​ಮೆಂಟ್​ನಲ್ಲಿ ಭಾರಿ ಅಗ್ನಿ ಅವಘಡ

ಹೆಲಿಕಾಪ್ಟರ್ ಇಳಿದಿದ್ದೇ ತಡ ಆತಂಕದಿಂದ ಸುತ್ತಮುತ್ತಲಿನ ರೈತರು ದೌಡಾಯಿಸಿ ಹೆಲಿಕಾಪ್ಟರ್ ಸುತ್ತ ಮುತ್ತಿಕೊಂಡ ಪ್ರಸಂಗವೂ ನಡೆಯಿತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.