ಚಾಮರಾಜನಗರ: ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಘೋಷಿಸಲು ಶ್ರಮವಹಿಸಿದ ಕನ್ನಡ ಚಳವಳಿಗಾರ ಹಾಗೂ ಚಾಮರಾಜನಗರದ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ಕನ್ನಡಪರ ಹೋರಾಟಗಾರರು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದರು.
ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದ ತನಕ ಜಾನಪದ ಕಲಾತಂಡಗಳು, ಕನ್ನಡ ಧ್ವಜಗಳ ಜೊತೆಗೆ ಬೆಳ್ಳಿ ರಥದಲ್ಲಿ ವಾಟಾಳ್ ನಾಗರಾಜ್ ಅವರನ್ನು ಮೆರವಣಿಗೆ ಮಾಡುವ ಮೂಲಕ ಕನ್ನಡಪರ ಸಂಘಟನೆಗಳು ಇಂದು ಬೆಳ್ಳಿಹಬ್ಬ ಆಚರಿಸಿದರು.
ಆ.15 ಕ್ಕೆ ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳು ಕಳೆದಿದ್ದು 3 ತಿಂಗಳುಗಳಾದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಆಗಲಿ ರಜತ ಮಹೋತ್ಸವ ಆಚರಣೆ ಮಾಡಿಲ್ಲ. ಹೀಗಾಗಿ ಕನ್ನಡಪರ ಸಂಘಟನೆಗಳೇ ಇಂದು ಬೆಳ್ಳಿ ಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ.
ಕತ್ತೆ, ಕುದುರೆ, ಎಮ್ಮೆ, ಗೋಣಿ ಚೀಲ, ಛತ್ರಿ ಹೀಗೆ ತರಹವಾರಿ ಅವತಾರದಲ್ಲಿ ಪ್ರತಿಭಟಿಸುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಬೆಳ್ಳಿರಥದಲ್ಲಿ ಕೂರಿಸಿ ಕನ್ನಡಪರ ಸಂಘಟನೆಗಳು ಹೃದಯಸ್ಪರ್ಶಿಯಾಗಿ ಅಭಿನಂದಿಸಿದೆ.
ಇದನ್ನೂ ಓದಿ:ಹಿಂದೂಗಳನ್ನು ತೆಗಳಿದ್ರೆ ಅಲ್ಪಸಂಖ್ಯಾತರ ವೋಟ್ ಬರುತ್ತೆ ಅನ್ನೋ ಲೆಕ್ಕಾಚಾರ: ಆರಗ ಜ್ಞಾನೇಂದ್ರ