ETV Bharat / state

ಚಾಮರಾಜನಗರ ಡಿಸಿಯಾಗಿ ಶಿಲ್ಪಾ ನಾಗ್ ನೇಮಕ: ಗಡಿಜಿಲ್ಲೆಯಲ್ಲಿ ಮಹಿಳಾ 'ಶಕ್ತಿ' - ನಿರ್ಗಮಿತ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ

ಚಾಮರಾಜನಗರ ಡಿಸಿಯಾಗಿ ಶಿಲ್ಪಾ ನಾಗ್ ನೇಮಕಗೊಂಡ ಬಳಿಕ ಪ್ರಮುಖ ಉನ್ನತ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳೇ ನೇಮಕವಾದಂತಾಗಿದೆ.

Women Power in Chamarajnagar
ಗಡಿಜಿಲ್ಲೆಯಲ್ಲಿ ಮಹಿಳಾ ಶಕ್ತಿ
author img

By

Published : Jul 10, 2023, 9:53 PM IST

ಚಾಮರಾಜನಗರ: ಚಾಮರಾಜನಗರ ನೂತನ ಜಿಲ್ಲಾಧಿಕಾರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಡಿ.ಎಸ್. ರಮೇಶ್ ವರ್ಗಾವಣೆ ಆದ ಬಳಿಕ ಕಳೆದ 1 ವಾರಗಳಿಂದ ಜಿಪಂ ಸಿಇಒ ಪೂವಿತಾ ಅವರೇ ಪ್ರಭಾರ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ನೂತನ ಡಿಸಿಯನ್ನಾಗಿ ಶಿಲ್ಪಾ ನಾಗ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಇನ್ನು, ಜಿಲ್ಲಾಧಿಕಾರಿ ಆಗಿ ಶಿಲ್ಪಾ ನಾಗ್ ನೇಮಕವಾದ ಬಳಿಕ ಪ್ರಮುಖ ಉನ್ನತ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ನೇಮಕವಾದಂತಾಗಿದ್ದು, ಸ್ತ್ರೀ ಶಕ್ತಿ ಕಂಡು ಬಂದಿದೆ. ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಶಿಲ್ಪಾ ನಾಗ್ ನೇಮಕವಾಗಿದ್ದರೆ, ಪೊಲೀಸ್ ವರಿಷ್ಠಾಧಿಕಾರಿಯಾಗಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಗೀತಾ ಹುಡೇದ, ಜಿಪಂ‌ ಸಿಇಒ ಆಗಿ ಪೂವಿತಾ, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ಆಗಿ ದೀಪ್ ಜೆ. ಕಂಟ್ರಾಕ್ಟರ್ ಈಗಾಗಲೇ ಆಡಳಿತ ನಡೆಸುತ್ತಿದ್ದಾರೆ.

ಇನ್ನು, ಈಗ ನೇಮಕವಾದ ಶಿಲ್ಪಾ ನಾಗ್ ಈ ಹಿಂದೆ ಚಾಮರಾಜನಗರ ಜಿಪಂ‌ ಸಿಇಒ ಆಗಿ ಕೂಡ ಕಾರ್ಯ ನಿರ್ವಹಿಸಿದ್ದು, ಜನ ಮೆಚ್ಚುಗೆ ಗಳಿಸಿದ್ದರು‌. ನರೇಗಾಗೆ ಶಕ್ತಿ ತುಂಬುವ ಸಲುವಾಗಿ ತಾವೇ ಒಮ್ಮೆ ಬಾಂಡ್ಲಿಯಲ್ಲಿ ಮಣ್ಣು ಹೊತ್ತು ಗಮನ ಸೆಳೆದಿದ್ದರು.

ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಟಿ ಭೂಬಾಲನ ಅಧಿಕಾರ ಸ್ವೀಕಾರ: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ 2015ರ ಬ್ಯಾಚ್‍ ಐಎಎಸ್ ಅಧಿಕಾರಿ ಟಿ. ಭೂಬಾಲನ್ ಅವರು ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ವಿಜಯಪುರ ನಿರ್ಗಮಿತ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ನೂತನ ಜಿಲ್ಲಾಧಿಕಾರಿಯನ್ನು ಬರಮಾಡಿಕೊಂಡು, ಹೂಗುಚ್ಛ ನೀಡಿ ಸ್ವಾಗತಿಸಿ, ಸೋಮವಾರ ಅಧಿಕಾರ ಹಸ್ತಾಂತರಿಸಿದರು.

3 ವರ್ಷಗಳ ಕಾಲ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಟಿ. ಭೂಬಾಲನ್ ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಈ ಹಿಂದೆ ಬೀದರ್​ ಮತ್ತು ದಾವಣಗೆರೆಯಲ್ಲಿ ಪ್ರೊಬೆಷನರಿಯಾಗಿ ಹಾಗೂ ಹರಪನಹಳ್ಳಿ ಮತ್ತು ಉಡುಪಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಚುನಾವಣಾ ಸಂದರ್ಭದಲ್ಲಿ ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: IAS transfer: ಆಯುಷ್ ಇಲಾಖೆ ಆಯುಕ್ತ ಮಂಜುನಾಥ್ ಸೇರಿದಂತೆ 9 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.