ETV Bharat / state

ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಶವ ಕೆರೆಯಲ್ಲಿ ಪತ್ತೆ.. ಕೌಟುಂಬಿಕ‌ ಕಲಹದಿಂದ ಆತ್ಮಹತ್ಯೆ ಶಂಕೆ - ಗೋವಿಂದರಾಜು ಅವರ ಶವ ಕೆರೆಯಲ್ಲಿ ಪತ್ತೆ

ಚಾಮರಾಜನಗರದ ನಿವಾಸಿ ಗೋವಿಂದರಾಜು ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Govindaraju's body found in lake
ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಶವ ಕೆರೆಯಲ್ಲಿ ಪತ್ತೆ
author img

By

Published : Feb 28, 2022, 5:09 PM IST

ಚಾಮರಾಜನಗರ: ನಿವೃತ್ತ ಹೆಡ್ ಕಾನ್ಸ್‌ಟೇಬಲ್​ವೊಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿಯಲ್ಲಿ ನಡೆದಿದೆ.

ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಶವ  ಕೆರೆಯಲ್ಲಿ ಪತ್ತೆ
ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಶವ ಕೆರೆಯಲ್ಲಿ ಪತ್ತೆ

ಚಾಮರಾಜನಗರದ ನಿವಾಸಿ ಗೋವಿಂದರಾಜು (64) ಮೃತರು. 10 ರಿಂದ15 ದಿನಗಳ ಹಿಂದೆಯೇ ಇವರು ಕೆರೆಗೆ ಹಾರಿ ಮೃತಪಟ್ಟಿದ್ದು, ಇಂದು ಕೊಳೆತ ಸ್ಥಿತಿಯಲ್ಲಿ ಶವ ತೇಲುತ್ತಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳಾಂತ್ಯದಲ್ಲಿ ಗೋವಿಂದರಾಜು ಕಾಣೆಯಾಗಿದ್ದ ಬಗ್ಗೆ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು.‌

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಬಲಿ

ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.