ETV Bharat / state

ಗ್ರಾಮಸ್ಥರಿಗೆ ಕಂಟಕವಾಗಿರುವ ಕುಡಿಯುವ ನೀರು : ಕಾಯಿಲೆಗೆ ಬೀಳುತ್ತಿರುವ ಮಕ್ಕಳು - Ramanagar village drinking water problem

ದಾವಣಗೆರೆಯ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ರಾಮನಗರ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರಿನ ಸೇವನೆಯಿಂದ ಈ ಗ್ರಾಮದಲ್ಲಿನ ಮಕ್ಕಳು ಹಾಗೂ ಹಿರಿಯರು ಅನಾರೋಗ್ಯಕ್ಕೀಡಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ..

ramanagar-village-drinking-water-problem
ಗ್ರಾಮಸ್ಥರಿಗೆ ಕಂಟಕವಾಗಿರುವ ಕುಡಿಯುವ ನೀರು : ಕಾಯಿಲೆಗೆ ಬೀಳುತ್ತಿರುವ ಮಕ್ಕಳು
author img

By

Published : Jun 18, 2022, 4:52 PM IST

Updated : Jun 19, 2022, 12:07 PM IST

ದಾವಣಗೆರೆ : ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಈವರೆಗೆ ಸುಮಾರು 7 ಜನ ಅಸುನೀಗಿದ್ದಾರೆ. ಅದೇ ರೀತಿಯಲ್ಲಿ ಇಲ್ಲೊಂದು ಗ್ರಾಮದಲ್ಲಿ ಕುಡಿಯುವ ನೀರೇ ಗ್ರಾಮಸ್ಥರಿಗೆ ಕಂಟಕವಾಗಿದೆ. ಈ ಕಲುಷಿತ ನೀರಿನ ಸೇವನೆಯಿಂದ ಮಕ್ಕಳು, ಹಿರಿಯರು ಅಸ್ವಸ್ಥರಾಗಿದ್ದು, ಬಡವರ್ಗದ ಜನರು ಆಸ್ಪತ್ರೆಗೆ ತೆರಳಿ ಸುಸ್ತು ಹೊಡೆದಿದ್ದಾರೆ. ಇನ್ನು ಈ ಬಗ್ಗೆ ಸಂಬಂಧಪಟ್ಟ ಶಾಸಕರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮನಗರ ಗ್ರಾಮದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರಿನ ಸೇವನೆಯಿಂದ ಈ ಗ್ರಾಮದಲ್ಲಿರುವ ಮಕ್ಕಳು ಹಾಗೂ ಹಿರಿಯರು ಆನಾರೋಗ್ಯಕ್ಕೀಡಾಗಿದ್ದಾರೆ. ಈ ಗ್ರಾಮದ ಕೂಗಳತೆ ದೂರದಲ್ಲಿರುವ ಕೆರೆಯ ಇಕ್ಕೆಲಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಮಳೆ ನೀರಿಗೆ ಕೆರೆ ತುಂಬಿ ಬೋರ್‌ವೆಲ್ ಮುಳುಗಿರುವುದರಿಂದ ಕಲುಷಿತ ನೀರು ಸೇವನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನೀರನ್ನು ಗ್ರಾಮಸ್ಥರು ಸೇವಿಸುತ್ತಿರುವುದರಿಂದ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಜಗಳೂರು ಬಿಜೆಪಿ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಜೊತೆಗೆ ಪಿಡಿಒ ಗಮನಕ್ಕೆ ತಂದಿದ್ದರೂ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಒಂದು ವರ್ಷ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಗ್ರಾಮಸ್ಥರಿಗೆ ಕಂಟಕವಾಗಿರುವ ಕುಡಿಯುವ ನೀರು : ಕಾಯಿಲೆಗೆ ಬೀಳುತ್ತಿರುವ ಮಕ್ಕಳು

ಈ ಗ್ರಾಮವು ನೂತನ ವಿಜಯನಗರ ಜಿಲ್ಲೆಯ ಭಾಗವಾಗಿರುವುದರಿಂದ ಯಾವೊಬ್ಬ ಅಧಿಕಾರಿ ಇಲ್ಲಿ ಭೇಟಿ ನೀಡುವುದಿಲ್ಲ. ಇದಲ್ಲದೆ ದಾವಣಗೆರೆ ಜಿಲ್ಲೆಯ ಗಡಿ ಹಂಚಿಕೊಂಡಿರುವ ಈ ರಾಮನಗರ ಗ್ರಾಮ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಜಿಲ್ಲೆಯ ಗಡಿ ಗ್ರಾಮ ಆಗಿರುವುದರಿಂದಲೂ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಾಗಿದೆ. ಇನ್ನು ಈ ಗ್ರಾಮದಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಮೂರ್ನಾಲ್ಕು ವರ್ಷಗಳೇ ಉರುಳಿದ್ದರಿಂದ ಈ ಗ್ರಾಮಸ್ಥರಿಗೆ ಕುಡಿಯುವ ನೀರು ಇಲ್ಲದಂತಾಗಿದೆ.

ಓದಿ : ಏಕಾಗ್ರತೆಯಿಂದ ಓದಿದರೇ ಸಾಧನೆ ಸುಲಭ : ಸಾನಿಕಾ ಗುಂಡೂರಾವ್ ಮನದಾಳದ ಮಾತು

Last Updated : Jun 19, 2022, 12:07 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.