ಚಾಮರಾಜನಗರ: 16 ವರ್ಷದ ಬಾಲಕಿಯೊಬ್ಬಳನ್ನು ಬಣ್ಣದ ಮಾತುಗಳಿಂದ ಪುಸಲಾಯಿಸಿ ಕರೆದೊಯ್ದು ತಾಳಿ ಕಟ್ಟಿ 3 ದಿನ ಸಂಸಾರ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದ ಮಹೇಂದ್ರ (21) ಎಂಬಾತ ಬಂಧಿತ ಆರೋಪಿ. ನಾಲ್ಕು ದಿನಗಳ ಹಿಂದೆ ಮಹೇಂದ್ರ 16 ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ತಮಿಳುನಾಡಿಗೆ ಕರೆದೊಯ್ದು ಅಲ್ಲೇ ಒಂದು ಮನೆ ಮಾಡಿ, ಮನೆಯಲ್ಲೇ ತಾಳಿ ಕಟ್ಟಿದ್ದಾನೆ. ಮೂರು ದಿನಗಳ ಕಾಲ ಬಾಲಕಿಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬೇಗೂರು ಪಿಎಸ್ಐ ರಾಜೇಂದ್ರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದು ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಲಾಗಿದೆ. ಬಾಲಕಿಯನ್ನು ಕರೆದೊಯ್ದಿದ್ದ ಬಗ್ಗೆ ಸಂತ್ರಸ್ತೆ ತಂದೆ ಬೇಗೂರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣವೂ ದಾಖಲಾಗಿದೆ.
ಇದನ್ನೂ ಓದಿ: ಪಾದಚಾರಿಗಳ ಮೇಲೆ ಹರಿದ ಎಲೆಕ್ಟ್ರಿಕ್ ಬಸ್: ಸ್ಥಳದಲ್ಲೇ ಐವರು ಸಾವು!