ETV Bharat / state

ಸಮ್ಮಿಶ್ರ ಸರ್ಕಾರದ ಮೊದಲ ಅತೃಪ್ತ ಶಾಸಕ ಸಿದ್ದರಾಮಯ್ಯ: ಶ್ರೀನಿವಾಸ್​ ಪ್ರಸಾದ್​​​ - chamrajanagara news

ಯಡಿಯೂರಪ್ಪ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಮನಸ್ಸಿನಲ್ಲಿರುವುದನ್ನ ಹೇಳಿದ್ದಾರೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಸಂಸದ ವಿ.ಶ್ರೀನಿವಾಸ ಪ್ರಸಾದ್
author img

By

Published : Nov 4, 2019, 1:38 PM IST

ಚಾಮರಾಜನಗರ: ಯಡಿಯೂರಪ್ಪ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಮನಸ್ಸಿನಲ್ಲಿರುವುದನ್ನ ಹೇಳಿದ್ದಾರೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಬಿಎಸ್​ವೈ ಮಾತನಾಡಿರುವುದರಲ್ಲಿ ತಪ್ಪೇನಿಲ್ಲ: ಆಡಿಯೋ ವೈರಲ್​ ಬಗ್ಗೆ ವಿ.ಶ್ರೀನಿವಾಸ ಪ್ರಸಾದ್ ಪ್ರತಿಕ್ರಿಯೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಅಸಲಿಯೋ,ನಕಲಿಯೋ ಎಂದು ಜಿಜ್ಞಾಸೆಯಿದೆ. ಒಂದು ವೇಳೆ ಅವರು ಮಾತನಾಡಿದ್ರೂ ತಪ್ಪೇನಿಲ್ಲ. ಅವರು ಯಾರಿಂದ ಸರ್ಕಾರ ರಚಿಸಿದ್ದೇವೆ ಎಂದು ಹೇಳಿದ್ದಾರೆ. ರಾಜೀನಾಮೆ ನೀಡಿದ12 ಮಂದಿ ಅನರ್ಹ ಶಾಸಕರಲ್ಲ. ಅವರು ಅತೃಪ್ತ ಶಾಸಕರು. ದೋಸ್ತಿ ಸರ್ಕಾರದ ಮೊದಲ ಅತೃಪ್ತ ಶಾಸಕ ಅಂದರೆ ಅದು ಸಿದ್ದರಾಮಯ್ಯ. ಮೈತ್ರಿ ಸರ್ಕಾರದ ವಿರುದ್ಧ ಮೊದಲು ಅತೃಪ್ತಿ ವ್ಯಕ್ತಪಡಿಸಿದ್ದೇ ಅವರು ಎಂದು ಲೇವಡಿ ಮಾಡಿದರು.

ಅತೃಪ್ತ ಶಾಸಕರು ರಾಜೀನಾಮೆ ನೀಡದಿದ್ದರೇ ಸರ್ಕಾರ ಎಲ್ಲಿ ರಚನೆಯಾಗುತ್ತಿತ್ತು. ಆದ್ದರಿಂದ,ಬಿಎಸ್​ವೈ ಅವರು ಅತೃಪ್ತ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿರುವುದಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಇನ್ನು, ಸಿದ್ದರಾಮಯ್ಯ ಕಾಡಿ-ಬೇಡಿ ವಿಪಕ್ಷ ನಾಯಕರಾಗಿದ್ದಾರೆ. ಕಾಂಗ್ರೆಸ್ ಸೋತು ಸುಣ್ಣವಾಗಿರುವುದರಿಂದ ಆಡಿಯೋ ವೈರಲ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ. ಅವರಿಗೆ ಬೇರೆ ಯಾವ ವಿಷಯಗಳು ಇಲ್ಲ. ಉಪಚುನಾವಣೆ ಬಳಿಕ ಸರ್ಕಾರ ಬೀಳಲಿದೆ ಹಾಗೂ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಪ್ರತಿಪಕ್ಷಗಳ ಮಾತಿನಲ್ಲಿ ಹುರುಳಿಲ್ಲ. ಮಧ್ಯಂತರ ಚುನಾವಣೆ ಎಂಬುದು ಕನಸು ಎಂದರು.

ಕರ್ನಾಟಕದ ಅನರ್ಹ ಶಾಸಕರ ಪ್ರಕರಣವನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು,ಐತಿಹಾಸಿಕ ತೀರ್ಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಬಿಎಸ್ವೈ ಮಾತನಾಡಿರುವುದರಲ್ಲಿ ತಪ್ಪೇನಿಲ್ಲ: ವೈರಲ್ ಆಡಿಯೋ ಕುರಿತು ಸಂಸದ ವಿ.ಶ್ರೀ ಪ್ರತಿಕ್ರಿಯೆ

ಚಾಮರಾಜನಗರ: ಯಡಿಯೂರಪ್ಪ ಮಾತನಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ, ಅವರ ಮನಸ್ಸಿನಲ್ಲಿದ್ದನ್ನು ಹೇಳಿದ್ದಾರೆಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.

Body:ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆಡಿಯೋ ಕುರಿತು ಅಸಲಿಯೋ ನಕಲಿಯೋ ಎಂದು ಜಿಜ್ಞಾಸೆಯಿದೆ. ಒಂದುವೇಳೆ ಅವರು ಮಾತನಾಡಿದರೂ ತಪ್ಪೇನಿಲ್ಲ, ಯಾರಿಂದ ಸರ್ಕಾರ ರಚಿಸಿದ್ದೇವೆ ಎಂದು ಹೇಳಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಜೀನಾಮೆ ನೀಡಿದ ೧೭ ಮಂದಿ ಅನರ್ಹ ಶಾಸಕರಲ್ಲ ಅವರು ಅತೃಪ್ತ ಶಾಸಕರು, ದೋಸ್ತಿ ಸರ್ಕಾರದ ಮೊದಲ ಅತೃಪ್ತ ಶಾಸಕ ಸಿದ್ದರಾಮಯ್ಯ. ಮೈತ್ರಿ ಸರ್ಕಾರದ ವಿರುದ್ಧ ಮೊದಲು ಅತೃಪ್ತಿ ವ್ಯಕ್ತಪಡಿಸಿದ್ದೇ ಅವರು ಎಂದು ಲೇವಡಿಯಾಡಿದರು.

ಅತೃಪ್ತ ಶಾಸಕರು ರಾಜೀನಾಮೆ ನೀಡದಿದ್ದರೇ ಸರ್ಕಾರ ಎಲ್ಲಿ ರಚನೆಯಾಗುತ್ತಿತ್ತು. ಆದ್ದರಿಂದ, ಬಿಎಸ್ ವೈ ಅವರು ಅತೃಪ್ತ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿರುವುದಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಸಿದ್ದರಾಮಯ್ಯ
ಕಾಡಿ ಬೇಡಿ ವಿಪಕ್ಷ ನಾಯಕರಾಗಿದ್ದಾರೆ. ಕಾಂಗ್ರೆಸ್ ಸೋತು ಸುಣ್ಣವಾಗಿರುವುದರಿಂದ ಆಡಿಯೋ ವೈರಲ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ, ಅವರಿಗೆ ಬೇರೆ ಯಾವ ವಿಷಯಗಳು ಇಲ್ಲಾ ಎಂದು ಟೀಕಿಸಿದರು.

ಉಪಚುನಾವಣೆ ಬಳಿಕ ಸರ್ಕಾರ ಬೀಳಲಿದೆ,ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಪ್ರತಿಪಕ್ಷಗಳ ಮಾತಿನಲ್ಲಿ ಹುರುಳಿಲ್ಲ. ಮಧ್ಯಂತರ ಚುನಾವಣೆ ಎಂಬುದು ಕನಸು ಎಂದು ವ್ಯಂಗ್ಯವಾಗಿದರು.

Conclusion:ಕರ್ನಾಟಕದ ಅನರ್ಹ ಶಾಸಕರ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಐತಿಹಾಸಿಕ ತೀರ್ಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.