ಚಾಮರಾಜನಗರ: ಎಲ್ಲರೂ ಮೀಸಲಾತಿ ಕೊಡಿ ಎನ್ನುತ್ತಿರುವುದು ನನಗೆ ಖುಷಿ ಆಗುತ್ತಿದೆ. ಏಕೆಂದರೆ ಮೀಸಲಾತಿ ಎಂದರೆ ಎಸ್ಸಿ, ಎಸ್ಟಿಗಳಿಗೆ ಮಾತ್ರ ಎಂಬ ಕಲ್ಪನೆ ಇತ್ತು ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಯ ಮಹತ್ವ ಎಲ್ಲರಿಗೂ ಈಗ ತಿಳಿಯುತ್ತಿದೆ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಆಯೋಗಗಳಿದ್ದು, ಅವರ ಮುಂದೆ ಮೀಸಲಾತಿ ಮನವಿಗಳು ಹೋಗಬೇಕು. ಸಿಎಂ, ಪಿಎಂ ಏಕಾಏಕಿ ಮೀಸಲಾತಿ ನೀಡಲು ಬರಲ್ಲ ಎಂದರು.
ಸಂಬಂಧಪಟ್ಟ ಆಯೋಗಗಳು ಅಧ್ಯಯನ ಮಾಡಿ ಅವರು ವರದಿ ಸಲ್ಲಿಸುತ್ತಾರೆ. ಯಾರ್ಯಾರು ಎಷ್ಟು ಜನಸಂಖ್ಯೆ ಇದ್ದಾರೋ ಅವರಿಗೆ ಅಷ್ಟು ಮೀಸಲಾತಿ ಕೊಡಬೇಕು. ಮೀಸಲಾತಿ ಪ್ರಮಾಣ ಶೇ. 50ರಷ್ಟು ಮಾತ್ರ ಇರಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು 100ಕ್ಕೆ 100ರಷ್ಟು ಮೀಸಲಾತಿ ತರಲಿ ಎಂದರು.
ಓದಿ: ಹರದನಹಳ್ಳಿಯಲ್ಲಿ ದಂಪತಿ ಮಿಂಚಿಂಗ್: ಪತಿ ಗ್ರಾಪಂ ಸಹಾಯಕ-ಪತ್ನಿ ಅಧ್ಯಕ್ಷೆ
ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೂ ಮೀಸಲಾತಿ ಕೊಡಲು ಮುಂದಾಗಿರುವುದರಿಂದ ಬ್ರಾಹ್ಮಣರಿಂದ ಎಸ್ಸಿವರೆಗೂ ಮೀಸಲಾತಿ ಫಲಾನುಭವಿಗಳಾಗುತ್ತಾರೆ. ಮೀಸಲಾತಿ ಇದ್ದರೂ ಮೆರಿಟ್ ಇರುವವರು ತಾನೇ ಬರುವುದು ಎಂದರು.