ETV Bharat / state

ಬಿಎಸ್‌ವೈ ಸಂಪುಟದಲ್ಲಿ ಗಡಿಜಿಲ್ಲೆಗಿಲ್ಲ ಪ್ರಾತಿನಿಧ್ಯ: ಸೋಮಣ್ಣಗೆ ಉಸ್ತುವಾರಿ ಜವಾಬ್ದಾರಿ?

ಬಿಎಸ್ ವೈ ಸರ್ಕಾರದ ನೂತನ ಸಂಪುಟದಲ್ಲಿ ಚಾಮರಾಜನಗರಕ್ಕೆ ಯಾವುದೇ ಮಂತ್ರಿಗಿರಿ ಸಿಕ್ಕಿಲ್ಲ. ಆದರೆ ಇತ್ತ ಜಿಲ್ಲೆಯಲ್ಲಿ ತನ್ನದೇ ಪ್ರಭಾವ ಹೊಂದಿರುವ ಬೆಂಗಳೂರಿನ ವಿಜಯನಗರ ಶಾಸಕ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.

author img

By

Published : Aug 20, 2019, 9:41 PM IST

Updated : Aug 20, 2019, 9:57 PM IST

ಸೋಮಣ್ಣ

ಚಾಮರಾಜನಗರ: ಬಿಎಸ್ ವೈ ಸರ್ಕಾರದ ನೂತನ ಸಂಪುಟದಲ್ಲಿ ಚಾಮರಾಜನಗರಕ್ಕೆ ಯಾವುದೇ ಸಚಿವಸ್ಥಾನ ಸಿಕ್ಕಿಲ್ಲ. ಜಿಲ್ಲೆಗೆ ಪ್ರಾತಿನಿಧ್ಯ ಸಿಗುವುದು ಅನುಮಾನ ಎಂದು ಈಟಿವಿ ಭಾರತ ಜು.24 ರಂದೇ ವರದಿ ಮಾಡಿತ್ತು. ಅದು ಇಂದು ನಿಜವಾಗಿದೆ.

ಬಿಎಸ್​​ವೈ ಸಂಪುಟದಲ್ಲಿ ಚಾಮರಾಜನಗರಕ್ಕೆ ಇಲ್ಲವೇ ಮಂತ್ರಿಗಿರಿ?

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗುಂಡ್ಲುಪೇಟೆ ಶಾಸಕ ಹೆಚ್.ಎಸ್.ಮಹಾದೇವಪ್ರಸಾದ್ ಮಂತ್ರಿಯಾಗಿದ್ದರು. ಅವರ ನಿಧನದಿಂದ ತೆರವಾದ ಪತ್ನಿ ಗೀತಾ ಮಹಾದೇವ ಪ್ರಸಾದ್ ಚುನಾವಣೆಯಲ್ಲಿ ಗೆದ್ದ ಬಳಿಕ ಮಂತ್ರಿಯಾದರು. ಮೈತ್ರಿ ಸರ್ಕಾರದಲ್ಲಿ ಸಿ. ಪುಟ್ಟರಂಗಶೆಟ್ಟಿ ಮತ್ತು ಬಿಎಸ್‌ಪಿ ಶಾಸಕ ಮಹೇಶ್ ಸಚಿವರಾಗಿದ್ದರು. ರಾಜಕೀಯ ಹೈಡ್ರಾಮಾದಿಂದ ಅಸ್ತಿತ್ವಕ್ಕೆ ಬಂದ ಬಿಎಸ್‌ವೈ ಸರ್ಕಾರದಲ್ಲಿ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರಿಗೆ ನಾಯಕರು ಮಣೆ ಹಾಕಲಿಲ್ಲ. ಮೊದಲ ಬಾರಿ ಶಾಸಕರಾಗಿರುವುದರಿಂದ 2ನೇ ಪಟ್ಟಿಯಲ್ಲೂ ಮಂತ್ರಿಭಾಗ್ಯ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಸೋಮಣ್ಣ ಉಸ್ತುವಾರಿ?

ಜಿಲ್ಲೆಯಲ್ಲಿ ತನ್ನದೇ ಪ್ರಭಾವ ಹೊಂದಿರುವ ಬೆಂಗಳೂರಿನ ವಿಜಯನಗರ ಶಾಸಕ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಇಲ್ಲವೇ ಹನೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಸೋಮಣ್ಣ ಸಾಕಷ್ಟು ಕಸರತ್ತು ನಡೆಸಿದ್ದರು.

Intro:ಬಿಎಸ್ ವೈ ಸಂಪುಟದಲ್ಲಿ ಗಡಿಜಿಲ್ಲೆಗೆ ಸಿಗಲಿಲ್ಲ ಪ್ರಾತಿನಿಧ್ಯ: ಉಸ್ತುವಾರಿ ಆಗಬಹುದು ಸೋಮಣ್ಣ!

ಚಾಮರಾಜನಗರ: ಬಿಎಸ್ ವೈ ಸರ್ಕಾರದ ನೂತನ ಸಂಪುಟದಲ್ಲಿ ಚಾಮರಾಜನಗರಕ್ಕೆ ಯಾವುದೇ ಮಂತ್ರಿಗಿರಿ ಸಿಕ್ಕಿಲ್ಲ. ಜಿಲ್ಲೆಗೆ ಪ್ರಾತಿನಿಧ್ಯ ಸಿಗುವುದು ಅನುಮಾನ ಎಂದು ಈಟಿವಿ ಭಾರತ ಜು.೨೪ ರಂದೇ ವರದಿ ಮಾಡಿತ್ತು.

Body:ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಗುಂಡ್ಲುಪೇಟೆ ಶಾಸಕ ಎಚ್.ಎಸ್.ಮಹಾದೇವಪ್ರಸಾದ್ ಮಂತ್ರಿಯಾಗಿದ್ದರು. ಅವರ ನಿಧನದಿಂದ ತೆರವಾದ ಪತ್ನಿ ಗೀತಾ ಮಹಾದೇವಪ್ರಸಾದ್ ಗೆದ್ದು ಬಳಿಕ ಮಂತ್ರಿಯಾದರು. ಮೈತ್ರಿ ಸರ್ಕಾರದಲ್ಲಿ ಸಿ.ಪುಟ್ಟರಂಗಶೆಟ್ಟಿ ಮತ್ತು ಬಿಎಸ್ ಪಿ ಶಾಸಕ ಮಹೇಶ್ ಸಚಿವರಾಗಿದ್ದರು. ರಾಜಕೀಯ ಹೈಡ್ರಾಮದಿಂದ ಅಸ್ತಿತ್ವಕ್ಕೆ ಬಂದ ಬಿಎಸ್ ವೈ ಸರ್ಕಾರದಲ್ಲಿ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರಿಗೆ ಮಣೆ ಹಾಕಿಲ್ಲ. ಮೊದಲ ಬಾರಿ ಶಾಸಕರಾಗಿರುವುದರಿಂದ ಎರಡನೇ ಪಟ್ಟಿಯಲ್ಲೂ ಮಂತ್ರಿಭಾಗ್ಯ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಸೋಮಣ್ಣ ಉಸ್ತುವಾರಿ: ಚಾಮರಾಜನಗರ ಜಿಲ್ಲೆಯಲ್ಲಿ ತನ್ನದೇ ಆದ ಪಡೆ ಹೊಂದಿರುವ ಬೆಂಗಳೂರಿನ ವಿಜಯನಗರ ಶಾಸಕ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.

Conclusion:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಇಲ್ಲವೇ ಹನೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತುನ್ನು ಸೋಮಣ್ಣ ನಡೆಸಿದ್ದರು.

ಸೋಮಣ್ಣನ file ಫೋಟೋ ಬಳಸಿ
Last Updated : Aug 20, 2019, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.