ETV Bharat / state

3 ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ.. ಭಕ್ತಿಯ ಜತೆಗೆ ಪರಿಸರ ಪ್ರೇಮ ನಿಜಕ್ಕೂ ಮಾದರಿ! - pop ganesha

ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಕಲ್ಪನಮ್ಮ ಎಂಬವರು ಕಳೆದ 32 ವರ್ಷದಿಂದ ನೇಮ-ನಿಷ್ಠೆಯಿಂದ ಮಣ್ಣಿನಲ್ಲಿ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. 3 ದಶಕದಿಂದ ಹುತ್ತದ ಮಣ್ಣಿನಲ್ಲಿ ಇವರು ತಯಾರಿಸುತ್ತಿರುವ ಗಣಪ ಪರಿಸರ ಸ್ನೇಹಿ ಕೂಡ ಹೌದು.

3 ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ:‌ ಭಕ್ತಿಯುತ ಪರಿಸರ ಪ್ರೇಮ ನಿಜಕ್ಕೂ ಮಾದರಿ!
author img

By

Published : Sep 1, 2019, 11:31 PM IST

ಚಾಮರಾಜನಗರ: ಗಣೇಶ ಚತುರ್ಥಿ ಬಂದರೆ ಥಟ್ಟನೆ ನೆನಪಾಗುವುದು ಮಾರುಕಟ್ಟೆಯಲ್ಲಿನ ಬಣ್ಣ-ಬಣ್ಣದ ಗಣಪಗಳು. ಆದರೆ, ಇಲ್ಲೊಬ್ಬರು ಬರೋಬ್ಬರಿ 32 ವರ್ಷಗಳಿಂದ ಮಣ್ಣಿನ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. ಅವರ ಕಲೆ, ಪರಿಸರ ಪ್ರೇಮ ನಿಜಕ್ಕೂ ಮೆಚ್ಚಲೇಬೇಕಾದದ್ದು.

3 ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ:‌ ಭಕ್ತಿಯುತ ಪರಿಸರ ಪ್ರೇಮ ನಿಜಕ್ಕೂ ಮಾದರಿ!

ಗೌರಿ ಹಬ್ಬ ಬಂತೆಂದರೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದಿಂದ ಕೂಡಿದ ಸುಂದರ ಪಿಒಪಿ ಗಣೇಶ ಎಲ್ಲರ ಗಮನ ಸೆಳೆಯುತ್ತಾನೆ. ಆದರೆ ಭೂಮಿ, ದನ ಕರುಗಳನ್ನೇ ದೇವರೆಂದು ಪೂಜಿಸುವ ಕೆಲ ಗ್ರಾಮಗಳ ರೈತ ಕುಟುಂಬಗಳಂತೂ ಸಗಣಿಯ ಕೆರಕಲು ಗಣಪತಿ ತಯಾರಿಸಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ಅಜ್ಜಿ ಮೊಮ್ಮಗ ಮಣ್ಣಿನ ಗಣಪತಿ ತಯಾರಿಸಿ ಪೂಜಿಸುವ ಮೂಲಕ ಪರಿಸರ ಪ್ರೇಮವನ್ನು ಮೆರೆಯುತ್ತಿದ್ದಾರೆ.

ಅಂದಹಾಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಕಲ್ಪನಮ್ಮ ಎಂಬವರು ಕಳೆದ 32 ವರ್ಷದಿಂದ ನೇಮ-ನಿಷ್ಠೆಯಿಂದ ಮಣ್ಣಿನಲ್ಲಿ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. ಈ 32 ವರ್ಷದಲ್ಲಿ ಇವರ ಭಕ್ತಿ- ತಾಳ್ಮೆ ಒಂದಿನಿತೂ ಕಡಿಮೆಯಾಗಿಲ್ಲವಂತೆ. ಪ್ರತೀ ಬಾರಿ ಇವರು ಸ್ನಾನಮಾಡಿ ಮಡಿಬಟ್ಟೆ ಉಟ್ಟು, ಉಪವಾಸದಲ್ಲಿದ್ದು ಹುತ್ತದ ಮಣ್ಣಿನಲ್ಲಿ ಗಣಪನ ಮೂರ್ತಿ ತಯಾರಿಸುತ್ತಾರೆ. ನಂತರ ಹಬ್ಬದ ದಿನದಂದು ತಮ್ಮ ಶ್ರಮದಿಂದ ಮೂಡಿಬಂದ ಗೌರಿ-ಗಣಪನಿಗೆ ಅರಿಶಿಣ-ಕುಂಕುಮ ಹಚ್ಚಿ, ಹೂಗಳಿಂದ ಅಲಂಕರಿಸಿ ಪೂಜಿಸುತ್ತಾರೆ.

Mud ganesha idol: Environmental ganapathi
ಮಣ್ಣಿನ ಗಣಪತಿ ತಯಾರಿಸಿ ಪೂಜಿಸುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿರುವ ಕಲ್ಪನಮ್ಮ

ಅಂದಿನ ಆ ಪ್ರಯತ್ನ ಇಂದಿಗೂ ಸಂಪ್ರದಾಯದಂತೆ ಮುಂದುವರೆದಿದೆ. ಅಜ್ಜಿಯ ಗಣಪನ ತಯಾರಿಕೆ ಕಂಡು ಕಳೆದ ೨ ವರ್ಷದಿಂದ ಮೊಮ್ಮಗನೂ ಅಜ್ಜಿಯೊಂದಿಗೆ ಗಣಪನ‌ ಮೂರ್ತಿ ತಯಾರಿಸಿ ಪೂಜಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಒಟ್ಟಿನಲ್ಲಿ ಪ್ರತಿ ವರ್ಷ ಸ್ವಂತ ಶ್ರಮದಿಂದ ತಯಾರಿಸಿದ ಮಣ್ಣಿನ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಪರಿಸರಕ್ಕೂ ಹಾನಿಯಾಗದಂತೆ ಗಣೇಶನ ಪೂಜಿಸುತ್ತಾ ಬಂದಿರುವ‌ ಇವರ ವಿನಾಯಕನ ಮೇಲಿನ ಭಕ್ತಿ ನಿಜಕ್ಕೂ ಮಾದರಿ.

Intro:೩ ದಶಕದಿಂದ ಹುತ್ತದ ಮಣ್ಣಿನಲ್ಲಿ ಅರಳುತ್ತಿರುವ ಗಣಪ:‌ ಅಜ್ಜಿ- ಮೊಮ್ಮಗನ ಭಕ್ತಿ- ಪರಿಸರಪ್ರೇಮ ನಿಜಕ್ಕೂ ಮಾದರಿ!

Web lead:

ಚಾಮರಾಜನಗರ: ಗಣೇಶ ಚತುರ್ಥಿ ಬಂದರೆ ಥಟ್ಟನೆ ನೆನಪಾಗುವುದು ಮಾರುಕಟ್ಟೆಯಲ್ಲಿನ ಬಣ್ಣ-ಬಣ್ಣದ ಗಣಪಗಳು. ಆದರೆ, ಇಲ್ಲೊಬ್ನರು ಬರೋಬ್ಬರಿ ೩೨ ವರ್ಷಗಳಿಂದ ಮಣ್ಣಿನ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದಾರೆ. ಅವರ ಕಲೆ, ಪರಿಸರ ಪ್ರೇಮದ ಸ್ಟೋರಿ ಇಲ್ಲಿದೆ ನೋಡಿ

Body:Vo1: ಗೌರಿ ಹಬ್ಬ ಬಂತೆಂದರೆ ಮಾರುಕಟ್ಟೆಯಲ್ಲಿ ಗಣಪನನ್ನು ತಂದು ಪೂಜಿಸುವುದು‌ ಸಾಮಾನ್ಯ.ಅದರೆ, ಇವರು ಮೂರು ದಶಕದಿಂದ ಮಣ್ಣಿನ ಗಣಪ ತಯಾರಿಸಿ ಪೂಜಿಸುವ ಜೊತೆಗೆ ಪರಿಸರ ಪ್ರೇಮವನ್ನು ಮೆರೆಯುತ್ತಿದ್ದಾರೆ.

Vflow :

Vo2- ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಕಲ್ಪನಮ್ಮ ಎಂಬವರು ೩೨ ವರ್ಷದಿಂದ ನೇಮ- ನಿಷ್ಟೆಯಿಂದ ಮಣ್ಣಿನಲ್ಲಿ ಗಣಪನನ್ನು ತಯಾರಿಸಿ ಪೂಜಿಸುತ್ತಾ ಬಂದಿದ್ದು, ೩೨ ವರ್ಷದಿಂದ ಇವರ ಭಕ್ತಿ- ತಾಳ್ಮೆ ಒಂದಿನಿತೂ ಕಡಿಮೆಯಾಗಿಲ್ಲ. ಮಡಿಬಟ್ಟೆ ಉಟ್ಟು ಉಪವಾಸದಲ್ಲಿದ್ದು ಹುತ್ತದ ಮಣ್ಣಿನಲ್ಲಿ ಗಣಪನ ಮೂರ್ತಿ ತಯಾರಿಸುವ ಇವರು ಅರಿಶಿಣ-ಕುಂಕುಮದ ಮೂಲಕ ಗೌರಿ- ಗಣೇಶನನ್ನು ಅಲಂಕರಿಸಿ ಪೂಜಿಸುತ್ತ ಬಂದಿದ್ದಾರೆ.

Vflow..

Vo3 ಸ್ವತಃ ಗಣಪನನ್ನು ತಯಾರಿಸಿ ಪೂಜಿಸಲು ಕಾರಣವೂ ಒಂದಿದೆ. ೩೦ ವರ್ಷಗಳ ಹಿಂದೆ ಮಗ ಚಿಕ್ಕವನಾಗಿದ್ದ ಸಂದರ್ಭದಲ್ಲಿ
ಮಗ ಗಣಪತಿ ಬೇಕೆಂದು ಹಠಹಿಡಿಯಲಿದ್ದು ಆ ವೇಳೆ ಗ್ರಾಮದಲ್ಲಿ ಗಣಪನ ಸಿಗದ ಕಾರಣ ಮಗನಿಗಾಗಿ ತಾವೇ ಸ್ವತಃ ಗಣಪತಿಯನ್ನು ತಯಾರಿಸುವ ಯೋಚನೆ ಮಾಡಿ ಅದೇ ಸಂಪ್ರದಾಯ ೩ ದಶಕದಿಂದ ಮುಂದುವರೆದು ಬಂದಿದೆ. ಗೌರಿ-ಗಣೇಶ ಮೂರ್ತಿ ತಯಾರಿಕೆ ಮುನ್ನ ಗ್ರಾಮದ ಗಣಪತಿ ದೇವಾಲಯಕ್ಕೆ ಪೂಜೆ ಸಲ್ಲಿಸುವ ಕಲ್ಪನಮ್ಮ ಪ್ರತಿವರ್ಷವೂ ವಿಭಿನ್ನ ಮೂರ್ತಿಗಳನ್ನು ತಯಾರಿಸುತ್ತಾರೆ.

Bite- ಕಲ್ಪನಮ್ಮ, ಗಣಪನ ಭಕ್ತರು

Vo4- ಅಜ್ಜಿಯ ಗಣಪನ ತಯಾರಿಕೆ ಕಂಡು ಕಳೆದ ೨ ವರ್ಷದಿಂದ ಮೊಮ್ಮಗನೂ ಅಜ್ಜಿಯೊಂದಿಗೆ ಗಣಪನ‌ ಮೂರ್ತಿ ತಯಾರಿಸಿ ಪೂಜಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ.

Vflow..

Conclusion:ಮಣ್ಣಿನ ಮೂರ್ತಿ ಪ್ರತಿಷ್ಟಾಪಿಸಿ ಮನೆಯನ್ನೆಲ್ಲಾ ಸಿಂಗರಿಸಿ ಪೂಜಿಸುತ್ತಾ ಬಂದಿರುವ‌ ಇವರು ಪ್ರತಿತಿಂಗಳ ಚೌತಿಯನ್ನು ನೇಮ‌ ನಿಷ್ಟೆಯಿಂದ ಮಾಡುತ್ತಾ ಬಂದಿದ್ದಾರೆ. ಇವರ ಪರಿಸರಪ್ರೇಮ- ಗಣಪನ ಮೇಲಿನ ಭಕ್ತಿ ನಿಜಕ್ಕೂ ಮಾದರಿ ಹಾಗೂ ಅಚ್ಚರಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.