ETV Bharat / state

ಆತ್ಮಸಾಕ್ಷಿ ಎಂದರೆ ಅಡ್ಡ ಮತದಾನ ಮಾಡಿಸುವುದಾ?: ಸಿದ್ದರಾಮಯ್ಯ ವಿರುದ್ಧ ಛಲವಾದಿ ಕಿಡಿ

ಅವರೊಂದು ರೀತಿಯಲ್ಲಿ ಎರಡು ತಲೆ ಹಾವಿದ್ದಂತೆ ಎಂಬ ಸಚಿವ ಶ್ರೀರಾಮುಲು ಹೇಳಿಕೆ ಸತ್ಯ. ಸಿದ್ದರಾಮಯ್ಯ ಅವರ ದ್ವಂದ್ವ ನೀತಿ ಹಾಸ್ಯಾಸ್ಪದವಾಗಿದೆ, ಜನರು‌ ನಗುವ ಪರಿಸ್ಥಿತಿಯನ್ನು ತಾವೇ ತಂದುಕೊಂಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

author img

By

Published : Jun 10, 2022, 3:52 PM IST

mlc-chalavadi-narayanaswamy-cririsises-siddaramaiah
ಆತ್ಮಸಾಕ್ಷಿ ಎಂದರೆ ಅಡ್ಡ ಮತದಾನ ಮಾಡಿಸುವುದಾ?: ಸಿದ್ದರಾಮಯ್ಯ ವಿರುದ್ಧ ಛಲವಾದಿ ಕಿಡಿ

ಚಾಮರಾಜನಗರ: ಆತ್ಮಸಾಕ್ಷಿ ಮತದಾನ ಎಂದರೆ ಅಡ್ಡ ಮತದಾನ ಮಾಡಿಸುವುದಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಆತ್ಮಸಾಕ್ಷಿ ಮತದಾನ ಎಂದು ಸಿದ್ದರಾಮಯ್ಯ ಅಡ್ಡಮತದಾನ ಮಾಡಲು ಪ್ರಚೋದನೆ ನೀಡಿದ್ದಾರೆ. ಹಿಂದೆ ಅವರದ್ದೇ ಶಾಸಕರು ಬೇರೆ‌ ಪಕ್ಷಕ್ಕೆ ಮತ ಹಾಕಿದಾಗ ಇವರೇನು ಮಾಡಿದರು? ಸ್ಪೀಕರ್ ಬಳಸಿಕೊಂಡು ಆ ಶಾಸಕರ ಸದಸ್ಯತ್ವವನ್ನೇ ರದ್ದುಗೊಳಿಸಿದರು ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.

ಅವರೊಂದು ರೀತಿಯಲ್ಲಿ ಎರಡು ತಲೆ ಹಾವಿದ್ದಂತೆ ಎಂಬ ಸಚಿವ ಶ್ರೀರಾಮುಲು ಹೇಳಿಕೆ ಸತ್ಯ. ಸಿದ್ದರಾಮಯ್ಯ ಅವರ ದ್ವಂದ್ವ ನೀತಿ ಹಾಸ್ಯಾಸ್ಪದವಾಗಿದೆ, ಜನರು‌ ನಗುವ ಪರಿಸ್ಥಿತಿಯನ್ನು ತಾವೇ ತಂದುಕೊಂಡಿದ್ದಾರೆ. ಬಿಜೆಪಿಯವರನ್ನು ಸೀಳುನಾಯಿಗಳಿಗೆ ಹೋಲಿಸಿ ಮಾತನಾಡುವುದು ಅವರಿಗೆ ಶೋಭೆಯಲ್ಲ. ಅಧಿಕಾರ ಕಳೆದುಕೊಂಡು ಹೀಗೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗಳಿಗೆ ಅಸಮಾಧಾನ ಹೊರಹಾಕಿದರು.

ಇದೇ ವೇಳೆ, ಕೋಮುವಾದಿ ಬಿಜೆಪಿಯನ್ನು ಹೊರಗಿಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಜಾತ್ಯತೀತ ಎಂದು ಹೇಳಿಕೊಂಡು ಜಾತಿ ಮಾಡುತ್ತಿದ್ದಾರೆ. ನಿಜವಾದ ಕೋಮುವಾದಿ ಅವರೇ ಹೊರತು ಇನ್ಯಾರು ಅಲ್ಲ, ಜಾತ್ಯಾತೀತ ಎಂಬುದು ಅವರಿಗೆ ಒಂದ ಪದವಾಗಿದೆಯೇ ಹೊರತು ಅವರ ನಡೆಯಾಗಿಲ್ಲ. ಮೈ.ವಿ. ರವಿಶಂಕರ್ ದಕ್ಷಿಣ ಪದವೀಧರ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ, ಬಿಜೆಪಿ ಪರ ಎಲ್ಲೆಡೆ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದ್ದು ಆತ್ಮಸಾಕ್ಷಿಯೇ?: ಬಿಜೆಪಿ ಟೀಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.