ಚಾಮರಾಜನಗರ: ರೈತ ಚಳುವಳಿಯಲ್ಲಿ ಡೋಂಗಿಗಳ್ಯಾರು, ನಿಜವಾದ ರೈತರು ಯಾರು, ರಾಜಕೀಯ ಪಕ್ಷಗಳ ಮುಖಂಡರು ಯಾರು ಎಂಬುದು ತಿಳಿಯದಾಗಿದೆ ಎಂದು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಹೇಳಿದರು.
ಗುಂಡ್ಲುಪೇಟೆಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಅಟಲ್ ಭೂ ಜಲ ಯೋಜನೆ ಅನುಷ್ಠಾನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರೈತ ಚಳುವಳಿ ನಡೆಯಿತು. ಅದು ಕಾಂಗ್ರೆಸ್ ಚಳುವಳಿಯಾಗಿತ್ತು. ಕಾಂಗ್ರೆಸ್ನವರು ಹಸಿರು ಶಾಲು ಹಾಕಿಕೊಂಡು ಘೋಷಣೆ ಕೂಗಿದರು. ಪಕ್ಷದ ಮುಖಂಡರು ಇದೀಗ ರೈತ ಮುಖಂಡರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸುದ್ದಿಯನ್ನೂ ಓದಿ: ಪೊಲೀಸ್ ಠಾಣೆಗೆ ಬರುವವರ ಜೊತೆ ಗೌರವಯುತವಾಗಿ ವರ್ತಿಸಿ: ಸಿಎಂ ಸೂಚನೆ
ಇನ್ನು ನನ್ನ ವಿರುದ್ಧ ಕೆಲವರು ಅನುದಾನ ದುರ್ಬಳಕೆ ಆರೋಪ ಮಾಡುತ್ತಿರುವುದರಲ್ಲಿ ಹುರುಳಿಲ್ಲ. ಅವರ ಅಸ್ತಿತ್ವಕ್ಕಾಗಿ ಆರೋಪ ಹೊರೆಸಿ ಅವರೇ ಪೇಚಿಗೆ ಸಿಲುಕುತ್ತಿದ್ದಾರೆ. ನನ್ನ ಬೆಂಬಲಿಗರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳುತ್ತಿದ್ದಾರೆ. ಗಣಿಗಾರಿಕೆ ಆರಂಭಿಸಿದ್ದೇ ಅವರ ಕುಟುಂಬ. ಇಲ್ಲಿಯವರೆಗೆ ಯಾರ್ಯಾರು ಎಷ್ಟು ಪೆನಾಲ್ಟಿ ಕಟ್ಟಿದ್ದಾರೆ ಎಂದು ದಾಖಲೆ ಪರಿಶೀಲಿಸಿದರೆ ಗೊತ್ತಾಗಲಿದೆ. ಯಾರು ಅಕ್ರಮದಲ್ಲಿ ತೊಡಗಿರುವವರು ಎಂದು ಹೆಸರು ಹೇಳದೆ ದಿ. ಹೆಚ್.ಎಸ್.ಮಹದೇವಪ್ರಸಾದ್ ಕುಟುಂಬದ ವಿರುದ್ಧ ಕಿಡಿಕಾರಿದರು.