ETV Bharat / state

ಅಂಬೇಡ್ಕರ್ ರಾಜಗೃಹದ ಮೇಲಿನ ದಾಳಿ ಪ್ರಕರಣದ ತನಿಖೆಗೆ ಶಾಸಕ ಎನ್. ಮಹೇಶ್ ಒತ್ತಾಯ

author img

By

Published : Jul 13, 2020, 8:39 PM IST

ಜುಲೈ 7 ರಂದು ಮಹಾರಾಷ್ಟ್ರದ ದಾದರ್​ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್​​ರವರ ರಾಜಗೃಹದ ಮೇಲೆ ಕಿಡಿಗೇಡಿಗಳು ನಡೆಸಿರುವ ದಾಂಧಲೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎನ್​. ಮಹೇಶ್​ ಒತ್ತಾಯಿಸಿದ್ದಾರೆ.

MLA N Mahesh
ಶಾಸಕ ಎನ್.ಮಹೇಶ್

ಕೊಳ್ಳೇಗಾಲ (ಚಾಮರಾಜನಗರ): ಜುಲೈ 7 ರಂದು ಮಹಾರಾಷ್ಟ್ರದ ದಾದರ್​ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್​​ರವರ ರಾಜಗೃಹದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವುದು ಖಂಡನೀಯ. ಸರ್ಕಾರ ಈ‌ ಕೃತ್ಯದ ಬಗ್ಗೆ ತೀವ್ರ ತನಿಖೆ‌ ನಡೆಸಿ ಇದರ ಹಿಂದಿರುವ ಕಾಣದ ಕೈಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ‌ ಎನ್. ಮಹೇಶ್ ಒತ್ತಾಯಿಸಿದ್ದಾರೆ.

ಶಾಸಕ ಎನ್.ಮಹೇಶ್ ಒತ್ತಾಯ

ಫೇಸ್​​ಬುಕ್ ಲೈವ್​​ನಲ್ಲಿ ಮಾತನಾಡಿದ ಅವರು, ರಾಜಗೃಹದ ಮೇಲಿನ ದಾಂಧಲೆ ಕುರಿತು ಮಹಾರಾಷ್ಟ್ರದ ಸ್ನೇಹಿತರ ಜೊತೆ ಮಾತನಾಡಿದ್ದೇನೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಒಂದು ಕೋಮುವಾದಿ ಶಕ್ತಿಗಳು ಜಾತಿ ಗಲಭೆಯನ್ನು ಸೃಷ್ಟಿಸಿ ದೊಡ್ಡ ಸುದ್ದಿ‌ ಮಾಡಲು ಈ ಕೃತ್ಯ ಎಸಗಿದ್ದಾರೆ. ಆದರೆ ಕಿಡಿಗೇಡಿಗಳ ಪ್ರಯತ್ನ ವಿಫಲವಾಗಿದ್ದು, ಮನೆ‌ ಮುಂದಿನ ಹೂ ಕುಂಡಗಳನ್ನು ಒಡೆದು ಗಲಾಟೆ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದರು.

ಈ ಸಂಬಂಧ ಉಮೇಶ ಸಿತಾರಾಮ್ ಜಾಧವ್ ಎಂಬಾತನನ್ನು ಪೊಲೀಸರು‌ ಬಂಧಿಸಿದ್ದು, ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದಾನೆ. ದಲಿತರು ಮತ್ತು ಹಿಂದುಳಿದ ಜಾತಿಗಳ ನಡುವೆ ಗಲಭೆ ಏರ್ಪಡಿಸುವ ಸಲುವಾಗಿ ಕೃತ್ಯ ನಡೆಸಲಾಗಿದ್ದು, ಈ ಷಡ್ಯಂತ್ರವನ್ನು ಭೇದಿಸಿ ಮುಂದೆ ಇಂಥ ಘಟನೆ ಮರುಕಳಿಸದಂತೆ‌ ನೋಡಿಕೊಳ್ಳುವುದು ಮಹಾರಾಷ್ಟ್ರ ಸರ್ಕಾರದ ಜವಾಬ್ದಾರಿಯಾಗಿದೆ‌ ಎಂದು ಹೇಳಿದರು.

ಕೃತ್ಯದ ಹಿಂದೆ ದೊಡ್ಡ ಪಿತೂರಿ:

ಅಂಬೇಡ್ಕರ್ ಅವರ ಮೇರು ವ್ಯಕ್ತಿತ್ವವನ್ನು ಹಾಳು ಮಾಡಲು ಈ ರೀತಿಯ‌ ಕೃತ್ಯ ಮೇಲಿಂದ ಮೇಲೆ ನಡೆಯುತ್ತಿವೆ. ಇದು ಜಾಧವ್ ಎಂಬ ಓರ್ವ ವ್ಯಕ್ತಿಯ ಕೃತ್ಯವಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದ್ದು, ಪ್ರಕರಣದ ಸೂಕ್ತ ತನಿಖೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಭದ್ರತಾ ವೈಫಲ್ಯ:

ರಾಜಗೃಹದ ಅರ್ಧ ಭಾಗವನ್ನು ಗ್ರಂಥಾಲಯವಾಗಿ ಮಾರ್ಪಡಿಸಲಾಗಿದ್ದು, ಇಲ್ಲಿ ಅಂಬೇಡ್ಕರ್ ಮೊಮ್ಮಕ್ಕಳು ಸಹ ವಾಸವಾಗಿದ್ದಾರೆ. ಆದರೆ ಇಲ್ಲಿಗೆ ಭದ್ರತೆ ಇರಲಿಲ್ವಾ ಎಂಬುದು ಪ್ರಶ್ನೆಯಾಗಿದೆ. ಸರ್ಕಾರ ಭದ್ರತಾ ವ್ಯವಸ್ಥೆ ಮಾಡುವಲ್ಲಿ ಎಡವಿದೆ ಎಂದರು.

ತಹಶೀಲ್ದಾರ್ ಕುಟುಂಬಕ್ಕೆ 5 ಕೋಟಿ ರೂ.‌ ಪರಿಹಾರ ನೀಡಿ:

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ‌ಚಂದ್ರಮೌಳೀಶ್ವರ ಕೊಲೆ ಪ್ರಕರಣ ಅವಮಾನೀಯ. ಭೂಮಿ ವಿವಾದ ಸರ್ವೆ ಕಾರ್ಯಕ್ಕೆ ತೆರಳಿದ ತಹಶೀಲ್ದಾರ್ ಅನ್ನು ಕೊಲೆಗೈಯಲಾಗಿದೆ. ಇಂಥ ವ್ಯಾಜ್ಯ ಬಗೆಹರಿಸುವ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಅವಶ್ಯಕ. ಆದರೆ ಸೂಕ್ತ ಭದ್ರತೆ ನೀಡದ ಕಾರಣ ಈ ದಾರುಣ ಘಟನೆ ನಡೆದಿದೆ. ಜನಪರ ಕೆಲಸ ಮಾಡುತ್ತಿದ್ದ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದು‌ಕೊಂಡಿದ್ದೇವೆ. ರಾಜ್ಯ ಸರ್ಕಾರ 25 ಲಕ್ಷ ನೆರವು ನೀಡಲು ಮುಂದಾಗಿದೆ. ಮೃತ ಅಧಿಕಾರಿಯ ಜೀವಕ್ಕೆ ‌ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ಸರ್ಕಾರ‌ ಅವರ ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.