ETV Bharat / state

ಹೆಚ್ಚು ಪ್ರವಾಸಿಗರು ಭೇಟಿ ಕೊಡುತ್ತಿರುವ ಸ್ಥಳದಲ್ಲಿ ಮಾದಪ್ಪನ ಬೆಟ್ಟ ಫಸ್ಟ್... ಗೋಪಾಲಸ್ವಾಮಿ ಬೆಟ್ಟಕ್ಕೆ ವಿದೇಶಿಗರು ಫಿದಾ!

author img

By

Published : Nov 29, 2019, 9:09 PM IST

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸೊರಗುತ್ತಿದ್ದರೂ ಸಹ ಪ್ರಸಿದ್ಧ ತೀರ್ಥಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಹೆಚ್ಚು ಮಂದಿ ಭೇಟಿ ನೀಡಿದ ಸ್ಥಳವೆಂದು ಅಂಕಿ-ಅಂಶಗಳ ಮೂಲಕ ತಿಳಿದು ಬಂದಿದೆ.

latest most tourists visited place news
ಹೆಚ್ಚು ಪ್ರವಾಸಿಗರು ಭೇಟಿ ಕೊಡುತ್ತಿರುವ ಸ್ಥಳದಲ್ಲಿ ಮಾದಪ್ಪನ ಬೆಟ್ಟ ಫಸ್ಟ್..ಗೋಪಾಲಸ್ವಾಮಿ ಬೆಟ್ಟಕ್ಕೆ ವಿದೇಶಿಗರು ಫಿದಾ!

ಚಾಮರಾಜನಗರ: ಪರಿಸರದಷ್ಟೇ ಪೌರಾಣಿಕ ಶಕ್ತಿ ಕೇಂದ್ರಗಳನ್ನೊಳಗೊಂಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸೊರಗುತ್ತಿದ್ದರೂ ಸಹ ಪ್ರಸಿದ್ಧ ತೀರ್ಥಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಹೆಚ್ಚು ಮಂದಿ ಭೇಟಿ ನೀಡಿರುವ ಸ್ಥಳವಾಗಿದೆಯೆಂದು ಅಂಕಿ-ಅಂಶಗಳ ಮೂಲಕ ತಿಳಿದು ಬಂದಿದೆ.

ಪ್ರವಾಸೋದ್ಯಮ ಇಲಾಖೆ ಕಳೆದೆರಡು ವರ್ಷದ ಅಂಕಿ-ಅಂಶವನ್ನು ಈಟಿವಿ ಭಾರತಕ್ಕೆ ಒದಗಿಸಿದೆ. ಈ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಮಲೆಮಹದೇಶ್ವರ ಬೆಟ್ಟಕ್ಕೆ 32,68,192 ಮಂದಿ ಭೇಟಿ ನೀಡಿದ್ದು, ಕಳೆದ ವರ್ಷ 34,25,799 ಮಂದಿ ಭೇಟಿ ನೀಡಿದ್ದರು. ಈ ವರ್ಷದ ಅಂತ್ಯಕ್ಕೆ ಕಳೆದ ವರ್ಷಕ್ಕಿಂತ 3-4 ಲಕ್ಷ ಪ್ರವಾಸಿಗರು ಹೆಚ್ಚಾಗುವ ನಿರೀಕ್ಷೆ ಇದೆ. ಇನ್ನೂ ಬಿಳಿಗಿರಿ ರಂಗನಾಥಸ್ವಾಮಿ ದೇಗುಲಕ್ಕೆ ಲಕ್ಷಾಂತರ ಮಂದಿ ಬಂದರೂ ಸಮೀಪದಲ್ಲೇ ಇರುವ ಕೆ.ಗುಡಿಗೆ ಭೇಟಿ ನೀಡುವವರ ಸಂಖ್ಯೆ 4 ಸಾವಿರ ದಾಟಿಲ್ಲ. 2017ರಲ್ಲಿ 3,461 ಮಂದಿ, 2018 ರಲ್ಲಿ 3,484 ಮಂದಿ ಭೇಟಿ ನೀಡಿದ್ದು, ಈ ಸೆಪ್ಟೆಂಬರ್ ಅಂತ್ಯಕ್ಕೆ 2,389 ಮಂದಿಯಷ್ಟೇ ಭೇಟಿ ಕೊಟ್ಟಿದ್ದಾರೆಂದು ಅಂಕಿ ಅಂಶ ಹೇಳುತ್ತವೆ.

ಉಳಿದಂತೆ, ಬಂಡೀಪುರ ಅಭಯಾರಣ್ಯಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಏರುಗತಿ ಕಂಡಿದ್ದು, 2017 ರಲ್ಲಿ 1,37,317 ಮಂದಿ, 2018ರಲ್ಲಿ 1,44,146 ಮಂದಿ, ಈ ವರ್ಷ 87,845 ಮಂದಿ ಭೇಟಿ ನೀಡಿದ್ದು ವರ್ಷಾಂತ್ಯಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವರು ಎಂದು ಸಿಎಫ್ಒ ಬಾಲಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಗಡಿಯಲ್ಲಿರುವ ಹೊಗೆನಕಲ್ ಜಲಪಾತಕ್ಕೆ ರಾಜ್ಯದ ನಾನಾ ಕಡೆಯಿಂದ ಭೇಟಿ ಕೊಡುವವರ ಸಂಖ್ಯೆ ದುಪ್ಪಟ್ಟಾಗಿದೆ. 2018 ರಲ್ಲಿ 31,091 ಮಂದಿ ಭೇಟಿ ನೀಡಿದ್ದು, ಈ ಸೆಪ್ಟೆಂಬರ್ ಅಂತ್ಯಕ್ಕೆ ಬರೋಬ್ಬರಿ 70,735 ಮಂದಿ ಭೇಟಿ ಕೊಟ್ಟಿದ್ದಾರೆ.

ವಿದೇಶಿಗರನ್ನು ಸೆಳೆದ ಕೃಷ್ಣ- ಭರಚುಕ್ಕಿ: ಹಿಮಾವೃತ ಪರ್ವತವನ್ನು ಒಳಗೊಂಡು ಸದಾ ತಂಪನೆಯ ವಾತಾವರಣವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಜಿಲ್ಲೆಯಲ್ಲೇ ಹೆಚ್ಚು ವಿದೇಶಿಗರು ಭೇಟಿ ನೀಡಿದ ಸ್ಥಳವಾಗಿದೆ. ಅದರಲ್ಲೂ, ಸನಿಹದಲ್ಲೇ ಬಂಡೀಪುರವಿದ್ದರೂ ಸಹ ಬಂಡೀಪುರಕ್ಕಿಂತ ಹೆಚ್ಚು ಗೋಪಾಲಸ್ವಾಮಿ ಬೆಟ್ಟದ ಪ್ರಕೃತಿಗೆ ಫಿದಾ ಆಗಿದ್ದಾರೆ. 2017ರಲ್ಲಿ 150 ಮಂದಿ , 2018 ರಲ್ಲಿ 1447 ಮಂದಿ ವಿದೇಶಿಗರು ಭೇಟಿ ನೀಡಿದ್ದು ಈ ಸೆಪ್ಟೆಂಬರ್‌ ಅಂತ್ಯಕ್ಕೆ 1044 ಮಂದಿ ಭೇಟಿ ಕೊಟ್ಟಿದ್ದಾರೆ.

ಬಂಡೀಪುರಕ್ಕೆ 743 ಮಂದಿ, ಬಿಳಿಗಿರಿರಂಗನಾಥನ ದೇಗುಲಕ್ಕೆ 770 ಮಂದಿ, ಭರಚುಕ್ಕಿಗೆ 340 ಮಂದಿ ಹಾಗೂ ಜೈನ ಕ್ಷೇತ್ರ ಕನಕಗಿರಿಗೆ 33 ಮಂದಿ ವಿದೇಶಿಗರು ಭೇಟಿ ನೀಡಿದ್ದು, ಮಲೆಮಹದೇಶ್ವರ ಬೆಟ್ಟ, ಹೊಗೆನಕಲ್ ಜಲಪಾತಕ್ಕೆ ಕಳೆದ ಮೂರು ವರ್ಷಗಳಲ್ಲಿ ಒಬ್ಬ ವಿದೇಶಿ ಪ್ರವಾಸಿಗನೂ ಸಹ ಭೇಟಿ ಕೊಟ್ಟಿಲ್ಲ ಎಂದು ಅಂಕಿಅಂಶ ತಿಳಿಸುತ್ತದೆ‌. ಜಿಲ್ಲೆಯ ಎಲ್ಲ ಪ್ರವಾಸಿತಾಣಗಳು ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯನ್ನು ವೃದ್ಧಿಸಿಕೊಂಡಿದ್ದರೆ ಭರಚುಕ್ಕಿ ಜಲಪಾತ ಮಾತ್ರ ಹಿಂದುಳಿದಿದೆ. 2017 ರಲ್ಲಿ 2,94,545 ಮಂದಿ, 2018ರಲ್ಲಿ ಬರೋಬ್ಬರಿ 7,82,761 ಮಂದಿ ಭೇಟಿ ನೀಡಿದ್ದು ಈ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಕೇವಲ 1,75,352 ಪ್ರವಾಸಿಗರಷ್ಟೇ ಭರಚುಕ್ಕಿಯ ಭೋರ್ಗರೆತವನ್ನು ಕಣ್ತುಂಬಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.