ETV Bharat / state

ಕಾದಾಟದಲ್ಲಿ ಗಾಯಗೊಂಡ ಬಂಡೀಪುರದ ಹುಲಿ ಸೆರೆ: ಚಿಕಿತ್ಸೆಗಾಗಿ ಬನ್ನೇರುಘಟ್ಟಕ್ಕೆ ಸಾಗಿಸುವಾಗ ಮೃತ - Four year tiger captured in Bandipura

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದ ನಾಯಳ್ಳಗಸ್ತಿನ ಸುತ್ತನಹಳ್ಳ ಪ್ರದೇಶದಲ್ಲಿ ಕಾದಾಟದಿಂದ ಗಾಯಗೊಂಡಿದ್ದ ಹುಲಿಯನ್ನು ಸೆರೆ ಹಿಡಿದು ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬನ್ನೇರುಘಟ್ಟಕ್ಕೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದೆ.

Bandipura Tiger
ಬಂಡೀಪುರದ ಹುಲಿ
author img

By

Published : Jul 9, 2021, 6:37 PM IST

ಚಾಮರಾಜನಗರ: ಕಾದಾಟದಲ್ಲಿ ಗಾಯಗೊಂಡಿದ್ದ ಹುಲಿಯನ್ನು ಸೆರೆ ಹಿಡಿದು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಆರೈಕೆಗಾಗಿ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‍ಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುಮಾರು 4 ರಿಂದ 5 ವರ್ಷದ ಹುಲಿಯನ್ನು ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದ ನಾಯಳ್ಳಗಸ್ತಿನ ಸುತ್ತನಹಳ್ಳ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಬೇರೊಂದು ಹುಲಿಯ ಜೊತೆ ಕಾದಾಟ ನಡೆಸಿ ಮುಂಭಾಗದ ಎಡಗಾಲು ಹಾಗೂ ಕಣ್ಣಿನ ಭಾಗದಲ್ಲಿ ಗಾಯಗಳಾಗಿರುವುದನ್ನು ಗುರುವಾರ ಗಮನಿಸಿದ ಗುಂಡ್ರೆ ವಲಯದ ಸಿಬ್ಬಂದಿ ಹುಲಿ ಮೇಲೆ ನಿಗಾ ಇಟ್ಟಿದ್ದರು.

ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಬೋನ್ ಕೂಡ ಇರಿಸಲಾಗಿತ್ತು. ಆದರೆ, ಬೋನ್‍ಗೆ ಬೀಳದ ಕಾರಣ ಇಂದು ಪಶುವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಅವರು ಡಾಟ್ ಮಾಡಿ ಹುಲಿಯನ್ನು ಸೆರೆ ಹಿಡಿದಿದ್ದಾರೆ ಎಂದು ಬಂಡೀಪುರ ಸಿಎಫ್ಒ ತಿಳಿಸಿದ್ದರು.

ಇದನ್ನೂ ಓದಿ: ಹೈಕೋರ್ಟ್‌ ತಳಮಹಡಿ ಕಚೇರಿಗಳ ಸ್ಥಳಾಂತರ: 2 ವಾರದಲ್ಲಿ ಸರ್ಕಾರದ ನಿಲುವು ತಿಳಿಸಲು ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.