ETV Bharat / state

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಿದ್ದು, ಡಿಕೆಶಿ ಭೇಟಿ: ಸ್ಥಳೀಯರಿಂದ ಪ್ರತಿಭಟನೆ, ಸರ್ಜನ್​ಗೆ ಸಿದ್ದು ಕ್ಲಾಸ್

ಜಿಲ್ಲಾಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿದ ವೇಳೆ, ಸ್ಥಳೀಯರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆ, ಸಭೆ ನಡೆಸಿದ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Siddaramaiah visited Chamrajnagar Hospital
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಿದ್ದು, ಡಿಕೆಶಿ ಭೇಟಿ
author img

By

Published : May 4, 2021, 1:55 PM IST

ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟಿರುವ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ ಶಿವಕುಮಾರ್ ಭೇಟಿ ನೀಡಿದರು. ಈ ವೇಳೆ ರೊಚ್ಚಿಗೆದ್ದ ಸ್ಥಳೀಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಚಾಮರಾಜನಗರ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದರು.

ಹತ್ತಕ್ಕೂ ಅಧಿಕ ಮಂದಿ ಸಿದ್ದರಾಮಯ್ಯ ಬಳಿ ತೆರಳಿ ನಮಗೆ ನ್ಯಾಯ ಕೊಡಿಸಬೇಕು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಡಿಸಿಯನ್ನು ತೆಗೆದುಹಾಕಬೇಕು. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸಿದ್ದು, ಡಿಕೆಶಿ ಭೇಟಿ

ಇದನ್ನೂ ಓದಿ: ಆಕ್ಸಿಜನ್ ದುರಂತದ ವರದಿ ಸಲ್ಲಿಕೆಗೆ 3 ದಿನ ಅವಕಾಶ ಇದೆ, ಸದ್ಯಕ್ಕೆ ಚರ್ಚೆ ಬೇಡ: ಕಳಸದ್

ಸಿದ್ದರಾಮಯ್ಯ ಹಾಗೂ ಡಿಕೆಶಿ ಜಿಲ್ಲಾಧಿಕಾರಿ ಮತ್ತು ವೈದ್ಯರ ಜೊತೆ ಸಭೆ ನಡೆಸಲು ತೆರಳಿದ ಬಳಿಕವೂ ಸರ್ಕಾರದ ವಿರುದ್ಧ ಜನ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಕೈಗೊಳ್ಳಲಾಗಿತ್ತು.

ಜಿಲ್ಲಾ ಸರ್ಜನ್​ಗೆ ಸಿದ್ದು ತರಾಟೆ: ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಸಭೆ ನಡೆಸುವ ವೇಳೆ ಜಿಲ್ಲಾ ಸರ್ಜನ್‌ ಅವರಿಗೆ ತರಾಟೆಗೆ ತೆಗೆದುಕೊಂಡರು. ಸತ್ಯ ಮುಚ್ಚಿಡಬೇಡಿ, ನೀವೋರ್ವ ವೈದ್ಯರು. ಒಮ್ಮೆ 33 ಬೆಡ್ ಎನ್ನುತ್ತೀರಿ, ಮತ್ತೊಮ್ಮೆ 53 ಎನ್ನುತ್ತೀರಿ, ಏನಪ್ಪಾ ಎಂದು ಕ್ಲಾಸ್ ತೆಗೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.