ಚಾಮರಾಜನಗರ: ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಫೋಟೋಗಳನ್ನು ಕ್ಲಿಕ್ಕಿಸಿಕೊಂಡ ಹುಲಿರಾಯ ಎಂಬ ಕೀರ್ತಿಗೆ ಪಾತ್ರವಾಗಿದ್ದ ಪ್ರಿನ್ಸ್ ಟೈಗರ್ ಬಳಿಕ ಅದೇ ಹಾದಿ ತುಳಿಯಲು ಮುಂದಾಗಿದ್ದಾನೆ ಮಾಯಾರ್ ಕಿಂಗ್.
ಹೌದು, ಕೆಲ ದಿನಗಳಿಂದ ವೈರಲ್ ಆಗಿರುವ ವಿಡಿಯೋ ಕುರಿತು 'ಈಟಿವಿ ಭಾರತ'ಕ್ಕೆ ಬಂಡೀಪುರ ಸಿಎಫ್ಒ ಬಾಲಚಂದ್ರ ಮಾತನಾಡಿ, ಬಂಡೀಪುರದ ಗಡಿಯಲ್ಲಿ ಈ ಹುಲಿಯಿದ್ದು, ಅತ್ಯಂತ ದಷ್ಟಪುಷ್ಟವಾಗಿ ಹಾಗೂ ತುಂಬಾ ಸುಂದರವಾಗಿದೆ. ಕೆಲವೊಮ್ಮೆ ವಾಹನ ಸವಾರರಿಗೆ ದರ್ಶನ ನೀಡಿದೆ. ಪ್ರಿನ್ಸ್(ಹುಲಿ) ರೀತಿ ಮನುಷ್ಯರನ್ನು ಕಂಡರೇ ಇದು ಅಳುಕುವುದಿಲ್ಲ ಎನ್ನವುದು ವಿಶೇಷ.
![ಮಾಯಾರ್ ಕಿಂಗ್ ಎಂಟ್ರಿ](https://etvbharatimages.akamaized.net/etvbharat/prod-images/kn-cnr-01-tiger-av-7202614_22072020094811_2207f_1595391491_226.png)
ಈ ಬಗ್ಗೆ ಗೋಪಾಲಸ್ವಾಮಿಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಪ್ರತಿಕ್ರಿಯಿಸಿ, ಪ್ರಿನ್ಸ್ ರೀತಿಯೇ ಫೋಟೋಗೆ ಚೆನ್ನಾಗಿ ಫೋಸ್ ನೀಡಲಿದ್ದು, ಮಾಯಾರ್ ಕಿಂಗ್ ಎಂತಲೇ ಇದು ಹೆಸರಾಗಿದೆ. ಸಫಾರಿ ವಲಯದಲ್ಲೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಾಯಾರ್ ಹುಲಿ ಎರಡನೇ ಪ್ರಿನ್ಸ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈರಲ್ ಆಗಿರುವ ವಿಡಿಯೋವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ತೆಗೆದಿದ್ದಾರೆ ಎನ್ನಲಾಗ್ತಿದೆ.