ಕೊಳ್ಳೇಗಾಲ: ಲಾಕ್‌ಡೌನ್ ಹಿನ್ನೆಲೆ ಸರ್ಕಾರ ಉಚಿತವಾಗಿ 1 ಲೀಟರ್ ಹಾಲನ್ನು ಸ್ಲಂ ನಿವಾಸಿಗಳಿಗೆ ನೀಡಲು ಆದೇಶ ಹೊರಡಿಸಿದ್ದಾರೆ. ಆದರೆ, ಇದು ಸರಿಯಾಗಿ ಹಂಚಿಕೆಯಾಗಿಲ್ಲ ಎಂದು ನಗರಸಭೆ ಸದಸ್ಯರು ಆಯಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರಸಭೆ ಆಯುಕ್ತರು 2231 ಲೀಟರ್ ಹಾಲನ್ನು ಆಯ್ಕೆಯಾದ 14 ವಾರ್ಡ್ಗಳ ಸದಸ್ಯರನ್ನು ಕರೆಸಿ ಹಂಚಿದ್ದಾರೆ. ಆದರೆ, ಇನ್ನುಳಿದ ವಾರ್ಡ್‌ನ ಸದಸ್ಯರೂ ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಲಂ ಬೋರ್ಡ್ಗಳಿಗೆ ಏಪ್ರಿಲ್ 14ರವರೆಗೂ ಹಾಲನ್ನು ವಿತರಿಸಬೇಕೆಂದು ಸೂಚನೆ ನೀಡಲಾಗಿದೆ. ಕೇವಲ ಅವರರಿಗೆ ಮಾತ್ರ ಹಾಲು ನೀಡಿದರೆ ನಮ್ಮ ಕ್ಷೇತ್ರದ ಬಡವರು ಏನು ಮಾಡಬೇಕು ಎಂದು ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಹಾಲು ನೀಡಬೇಕು, ಎಂಬ ಕೂಗು ಕೇಳಿ ಬಂದಿತು.