ETV Bharat / state

ಬಂಡೀಪುರ ಕಾಡಲ್ಲಿ ರಾಗಾ, ಸಿದ್ದು ರೂಲ್ಸ್ ಬ್ರೇಕ್ ಆರೋಪ : ಕ್ರಮಕ್ಕೆ ಬಿಜೆಪಿ ಒತ್ತಾಯ - ಈಟಿವಿ ಭಾರತ ಕನ್ನಡ

ಭಾರತ್​ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸುವಾಗ ಬಂಡೀಪುರ ಕಾಡಲ್ಲಿ ರಾಹುಲ್​ ಗಾಂಧಿ ಅವರನ್ನು ಸ್ವಾಗತಿಸುವಾಗ ಅರಣ್ಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

bandipura-rule-breaking-allegation-against-rahul-gandhi-and-siddaramaiah
ಬಂಡೀಪುರ ಕಾಡಲ್ಲಿ ರಾಗಾ, ಸಿದ್ದು ರೂಲ್ಸ್ ಬ್ರೇಕ್ ಆರೋಪ : ಕ್ರಮಕ್ಕೆ ಬಿಜೆಪಿ ಒತ್ತಾಯ
author img

By

Published : Oct 1, 2022, 6:14 PM IST

ಚಾಮರಾಜನಗರ :‌ ಭಾರತ್ ಜೋಡೋ ಯಾತ್ರೆ ವಿರುದ್ಧ ಮುಗಿಬಿದ್ದಿರುವ ಬಿಜೆಪಿಗರು ಈಗ ರಾಹುಲ್ ಗಾಂಧಿ, ಸಿದ್ದರಾಮಯ್ಯ ವಿರುದ್ಧ ಬಂಡೀಪುರ ಕಾಡಲ್ಲಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶುಕ್ರವಾರ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸುವಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಣಸೆಮರದ ರಸ್ತೆಯ ಬಳಿ ರಾಗಾ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ,ಎಚ್ ಸಿ ಮಹದೇವಪ್ಪ ಅವರು ಅರಣ್ಯ ನಿಯಮ ಗಾಳಿಗೆ ಅವರನ್ನು ಸ್ವಾಗತಿಸಿದ್ದಾರೆ ಎಂದು ಗುಂಡ್ಲುಪೇಟೆ ಬಿಜೆಪಿ ಮಂಡಲ ಆರೋಪಿಸಿದೆ.

bandipura-rule-breaking-allegation-against-rahul-gandhi-and-siddaramaiah
ಬಂಡೀಪುರ ಕಾಡಲ್ಲಿ ರಾಗಾ, ಸಿದ್ದು ರೂಲ್ಸ್ ಬ್ರೇಕ್ ಆರೋಪ : ಕ್ರಮಕ್ಕೆ ಬಿಜೆಪಿ ಒತ್ತಾಯ

ಕೈ ನಾಯಕರು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿ ಅರಣ್ಯದ ನಡುವೆ ವಾಹನಗಳನ್ನು‌ ಪಾರ್ಕ್ ಮಾಡಿದ್ದಾರೆ. ಇದು ಕಾಯ್ದೆಯಡಿ ಅಪರಾಧವಾಗಿದೆ. ಸಾಮಾನ್ಯ ಪ್ರವಾಸಿಗರು ಕಾಡಿನ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿದರೆ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಕೈ ನಾಯಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಅಧಿಕಾರಿಗೆ ಬಿಜೆಪಿ ಮುಖಂಡರು ದೂರು ಸಲ್ಲಿಸಿದರು.

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ: ರಸ್ತೆಯಲ್ಲಿ ಯುವಕನ ಪೇಸಿಎಂ ಶರ್ಟ್ ಬಿಚ್ಚಿಸಿ, ಹೊಡೆದ ಪೊಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.