ಚಾಮರಾಜನಗರ: ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ 24 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 78ಕ್ಕೇರಿದೆ.
ಚಾಮರಾಜನಗರದಲ್ಲಿ 7, ಗುಂಡ್ಲುಪೇಟೆಯಲ್ಲಿ 11, ಯಳಂದೂರಿನಲ್ಲಿ 1 ಹಾಗೂ ಕೊಳ್ಳೇಗಾಲದಲ್ಲಿ 5 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 29ಕ್ಕೇರಿದೆ.
ಇಂದು ಪತ್ತೆಯಾದ 24 ಪ್ರಕರಣಗಳಲ್ಲಿ ಮೂವರು ಮನೆಯಲ್ಲೇ ಇದ್ದವರಿಗೆ, ಯಳಂದೂರಿನ ಓರ್ವ ಸಾಮಾಜಿಕ ಕಾರ್ಯಕರ್ತನಿಗೆ, ಚಾಮರಾಜನಗರದ ಓರ್ವ ಆಟೋ ಚಾಲಕ, ಗುಂಡ್ಲುಪೇಟೆಯ ಇಬ್ಬರು ಮೆಕ್ಯಾನಿಕ್ ಗಳು, ದನದ ವ್ಯಾಪಾರಿ ಇರುವುದು ಕಳವಳಕಾರಿಯಾಗಿದೆ. 187 ಪ್ರಾಥಮಿಕ, ದ್ವಿತೀಯ ಸಂಪರ್ಕಿತರು ನಿಗಾದಲ್ಲಿದ್ದಾರೆ. ಇನ್ನೂ 1079 ವ್ಯಕ್ತಿಗಳ ಪರೀಕ್ಷಾ ವರದಿ ಬರಬೇಕಿದೆ.