ಚಾಮರಾಜನಗರ: ಇತ್ತೀಚೆಗಷ್ಟೇ ಸ್ಥಳೀಯ ಸೋಲಿಗರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದ ಟಿಬೆಟಿಯನ್ ನಿರಾಶ್ರಿತರು ಈಗ ಮಹಾಮಾರಿಯನ್ನು ಜಯಿಸಿದ್ದಾರೆ.
ಭಾರತ ಸರ್ಕಾರವು ಟಿಬೆಟಿಯನ್ ನಿರಾಶ್ರಿತರಿಗೆ ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿ ಆಶ್ರಯ ಕಲ್ಪಿಸಿದೆ. ಇಲ್ಲಿ 22 ಹಳ್ಳಿಗಳನ್ನು ನಿರ್ಮಿಸಿಕೊಂಡು 3,500ಕ್ಕೂ ಹೆಚ್ಚು ಟಿಬೆಟಿಯನ್ನರು ವಾಸ ಮಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಇಲ್ಲಿನ 137 ಮಂದಿಗೆ ಕೊರೊನಾ ವಕ್ಕರಿಸಿತ್ತು. ಸದ್ಯ ಎಲ್ಲರೂ ಕೋವಿಡ್ ಮುಕ್ತರಾಗಿದ್ದು, ವಿಶೇಷವೆಂದರೆ ಸೋಂಕಿಗೆ ಯಾರೊಬ್ಬರು ಬಲಿಯಾಗಿಲ್ಲ.
ತಮ್ಮ ಆಸ್ಪತ್ರೆಯಲ್ಲಿ ಮೂರು ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಿ, ಜಿಲ್ಲಾಡಳಿತದ ಸಹಕಾರದೊಡನೆ ತಮ್ಮದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಟಿಬೆಟಿಯನ್ನರು ಕೊರೊನಾ ತಡೆಗಟ್ಟಿದ್ದು, ಲಸಿಕೆ ಅಭಿಯಾನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹೋಗಲಾಡಿಸಲು ಟಿಬೆಟಿಯನ್ನರು ತಮ್ಮಲ್ಲೇ ಟಾಸ್ಕ್ ಫೋರ್ಸ್ ರೀತಿ ಸಭೆಗಳನ್ನು ನಡೆಸುತ್ತಿರುವುದರಿಂದ ಇಲ್ಲಿ ವಾಸಿಸುವ 22 ಸೆಟಲ್‌ಮೆಂಟ್ ವಿಲೇಜ್‌ಗಳು ಕೊರೊನಾಮುಕ್ತವಾಗಿವೆ. ಇಲ್ಲಿನ ದಾಂಡೇಲಿಂಗ್ ವಾನ್‌ಥೈಲ್ ಚಾರಿಟಬಲ್ ಟ್ರಸ್ಟ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೊದಲು ಜ್ವರ ತಪಾಸಣೆ ಮಾಡಲಿದ್ದು, ಕೋವಿಡ್ ಲಕ್ಷಣಗಳೇನಾದರೂ ಕಂಡುಬಂದರೆ ಸಿಸಿ ಕೇಂದ್ರಕ್ಕೆ ರವಾನಿಸುವ ಕೆಲಸ ಮಾಡಲಿದೆ.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ನಾಯಕತ್ವ ಬದಲಾವಣೆ ಅಪ್ರಸ್ತುತ: ಎನ್.ಮಹೇಶ್