ಬೆಂಗಳೂರು: ತಾಯಿಯನ್ನ ಬೀದಿಗೆ ತಳ್ಳಿ ತಪ್ಪು ಮಾಡಿದ್ದ ಮಕ್ಕಳ ಮನಸ್ಸು ಮರಗಿದೆ. 'ಈಟಿವಿ ಭಾರತ'ದ ವರದಿಯಿಂದ ಎಚ್ಚೆತ್ತುಕೊಂಡಿರುವ ವೃದ್ಧೆಯ ಮಕ್ಕಳು ತಾಯಿಯನ್ನು ಪುನಃ ಗೂಡು ಸೇರಿಸಿಕೊಂಡಿದ್ದಾರೆ.
ಹೌದು, ಸಿಲಿಕಾನ್ ಸಿಟಿಯ ಇಂದಿರಾನಗರದ ನಿವಾಸಿ ಗೌರಮ್ಮ, ನೊಂದು ಲ್ಯಾವೆಲ್ಲಿ ಕಮಿಷನರ್ ಕಚೇರಿಗೆ ಬಂದು ತನಗಾದ ನೋವನ್ನ ಯಾರ ಬಳಿ ಹೇಳಲಿ ಅಂತ ಹುಡುಕಾಟ ನಡೆಸ್ತಿದ್ರು. ಆ ಸಮಯದಲ್ಲಿ ಅವ್ರನ್ನ ಈಟಿವಿ ಭಾರತದ ಪ್ರತಿನಿಧಿ, ಕಮಿಷನರ್ ಕಚೇರಿಯಲ್ಲಿರುವ ಹಿರಿಯರ ಸಹಾಯವಾಣಿಗೆ ಕರೆದೊಯ್ದು ಸಹಾಯ ಮಾಡುವಂತೆ ಕೇಳಿದ್ದರು. ಹಿರಿಯ ಸಹಾಯವಾಣಿಯ ಸಮಾಲೋಚಕಿ ಸಂಧ್ಯಾ ಅವರು ಗೌರಮ್ಮನ ಮಕ್ಕಳಿಗೆ ಕರೆ ಮಾಡಿ ನಾಲ್ವರನ್ನು ವಿಚಾರಿಸಿದಾಗ ಇಬ್ಬರು ಮಕ್ಕಳು ತಾವು ಮಾಡಿದ ತಪ್ಪನ್ನು ಅರಿತು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ನಂತರ ಈಟಿವಿ ಭಾರತ ಜೊತೆ ಮಾತಾನಾಡಿದ ಸಂಧ್ಯಾ ಅವರು, ಗೌರಮ್ಮನ ಮಕ್ಕಳು ಪ್ರತಿ ತಿಂಗಳು ಜೀವನಾಂಶ ಕೊಡುವುದಾಗಿ ಒಪ್ಪಿದ್ದಾರೆ. ಗೌರಮ್ಮ ಕೂಡ ಚೆನ್ನಾಗಿದ್ದಾರೆ. ಅವರಿಗೆ ಈ ರೀತಿ ಹಿರಿಯ ಸಹಾಯವಾಣಿ ಇರುವುದು ಗೊತ್ತಿರಲಿಲ್ಲ. ಈಟಿವಿ ಭಾರತದ ಕಡೆಯಿಂದ ಗೊತ್ತಾಯ್ತು. ಹಿರಿಯರಿಗೆ ಸಮಸ್ಯೆ ಅಂತ ಬಂದಾಗ ಈ ಸಂಸ್ಥೆಗೆ ಬನ್ನಿ, ನಾವು ಸಹಾಯ ಮಾಡ್ತಿವಿ ಎಂದು ಹೇಳಿದ್ದಾರೆ.