ETV Bharat / state

ಟಿಡಿಆರ್​​ ಹಗರಣ: ಮೊಕದ್ದಮೆ ದಾಖಲಿಸಲು ಸರ್ಕಾರದ ಮೊರೆ ಹೋಗುತ್ತಿರುವ ಎಸಿಬಿ - undefined

ಟಿಡಿಆರ್ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಒಂದಲ್ಲ ಮೂರು ಬಾರಿ ಬಿಬಿಎಂಪಿ, ಬಿಡಿಎ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ನಡೆಸಲು ಸರ್ಕಾರಕ್ಕೆ ಅನುಮತಿಗಾಗಿ ಕಡತ ಕಳುಹಿಸಿದೆ. ಸರ್ಕಾರ ಅನುಮತಿ ನೀಡದೆ ಕಡತವನ್ನ ವಾಪಸ್ಸು ಕಳುಹಿಸಿದೆ. ಇದರಿಂದ ಟಿಡಿಆರ್ ಹಗರಣದ ತನಿಖೆಗೆ ಹಿನ್ನಡೆಯಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳ
author img

By

Published : Jul 3, 2019, 7:22 PM IST

ಬೆಂಗಳೂರು: ಕೋಟ್ಯಂತರ ರೂ.ಗಳ ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ, ಬಿಡಿಎ ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳು ಶಾಮೀಲಾಗಿದ್ದು, ಇವರ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸಿಬಿಗೆ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳ

ಬಿಬಿಎಂಪಿಯಲ್ಲಿ ಬಹುದೊಡ್ಡ ಹಗರಣವೆಂದು ಭಾವಿಸಲಾಗಿರುವ ಟಿಡಿಆರ್ ಹಗರಣದಲ್ಲಿ ಹಲವು ಅಧಿಕಾರಿಗಳ ಹೆಸರು ಕೇಳಿ ಬಂದಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಎಸಿಬಿ ಸರ್ಕಾರದ ಅನುಮತಿ ಕೋರಿದೆ. ಆದರೆ ಇದುವರೆಗೂ ಅನುಮತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನು ಟಿಡಿಆರ್ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಒಂದಲ್ಲ ಮೂರು ಬಾರಿ ಸರ್ಕಾರಕ್ಕೆ ಅನುಮತಿಗಾಗಿ ಕಡತ ಕಳುಹಿಸಿದೆ. ಸರ್ಕಾರ ಅನುಮತಿ ನೀಡದೆ ಕಡತವನ್ನ ವಾಪಸ್​​​​ ಕಳುಹಿಸಿದೆ. ಇದರಿಂದ ಟಿಡಿಆರ್ ಹಗರಣದ ತನಿಖೆಗೆ ಹಿನ್ನಡೆಯಾಗುತ್ತಿದೆ. ಈ ಹಗರಣದಲ್ಲಿ ಬಿಡಿಎ ಎಂಜಿನಿಯರ್ ಕೃಷ್ಣಲಾಲ್ ಜೊತೆಗೆ ನಿವೃತ್ತ ಅಧಿಕಾರಿಯೊಬ್ಬರ ಮೇಲೆ ಮಾತ್ರ ಸರ್ಕಾರ ಪ್ರಕರಣ ದಾಖಲಿಸಿ ದಾಳಿ ನಡೆಸಲು ಎಸಿಬಿಗೆ ಅನುಮತಿ ನೀಡಿದೆ. ಆದರೆ ಉಳಿದ ನಿವೃತ್ತ ಹಾಗೂ ಹಾಲಿ ಇರುವ ಅಧಿಕಾರಿಗಳ ಮೇಲೆ ದಾಳಿ‌ ಮಾಡಲು ಅನುಮತಿ ನೀಡದೆ ಇರುವುದರಿಂದ ಸರ್ಕಾರದ ನಡೆ ಅನುಮಾನ ಹುಟ್ಟಿಸುವಂತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ಎಸಿಬಿಯು ಈಗಾಗಲೇ ಟಿಡಿಆರ್ ಹಗರಣ ಕುರಿತಂತೆ ಕೃಷ್ಣಲಾಲ್ ಹಾಗೂ ಆತನ ಆಪ್ತರ ಮನೆ ಮೇಲೆ ದಾಳಿ‌ ನಡೆಸಿ ಕೆಲ ದಾಖಲೆ ಕ್ರೋಢೀಕರಿಸಲಾಗಿದೆ. ಆದರೆ ತನಿಖೆ ಪೂರ್ಣವಾಗಿ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಸಿಗದೇ ಇರುವುದು ಎಸಿಬಿ ಅಧಿಕಾರಿಗಳಿಗೆ ಬಹಳ ಹಿನ್ನಡೆಯಾಗಿದೆ ಎಂದು ಎಸಿಬಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Intro:ಟಿಡಿ ಆರ್ ಹಗರಣದಲ್ಲಿ ಮತ್ತಷ್ಟು ಹಾಲಿ‌ಮತ್ತು‌ನಿವತ್ತ ಅಧಿಕಾರಿಗಳ ಶಾಮೀಲು
ಮೊಕ್ಕದಮ್ಮೆ ದಾಖಲಿಸಲು ಸರ್ಕಾರಕ್ಕೆ ಮೊರೆ ಇಡುತ್ತಿರುವ ಎಸಿಬಿ
Exclusive
bhavya

ಕೋಟ್ಯಾಂತರ ರೂಪಾಯಿಗಳ ಟಿಡಿಆರ್ ಹಗರಣದಲ್ಲಿ ಬಿಬಿಎಂಪಿ ,ಬಿಡಿಎ ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳು ಶಾಮೀಲಾಗಿದ್ದು ಇವರ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸಿಬಿಗೆ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿದೆ.

ಈಟಿವಿ ಭಾರತ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಬಿಎಂಪಿಯಲ್ಲಿ ಬಹುದೊಡ್ಡ ಹಗರಣವೆಂದೇ ಭಾವಿಸಲಾಗಿರುವ ಟಿಡಿ ಆರ್ ಹಗರಣದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ಎಸ್ ಟೋಪಗಿ,
ಬಿಬಿಎಂಪಿಯ ನಿವೃತ್ತ ಪ್ರಧಾನ ಅಭಿಯಂತರ ರಾಮೇಗೌಡ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ನಿವೃತ್ತ ಮುಖ್ಯಲೆಕ್ಕಾಧಿಕಾರಿ ವೆಂಕಟೇಶಪ್ಪ,ಕರ್ನಾಟಕ ವಿದ್ಯುತ್ ನಿಗಮದ ನಿವೃತ್ತ ಮುಖ್ಯ ಇಂಜಿನಿಯರ್ ಎಂಎಂ ರಂಗನಾಥ್,ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯಪಾಲಕ ಅಭಿಯಂತರ ಚನ್ನಯ್ಯ, ಪದ್ಮಾನಾಭನಗರ ಕಂದಾಯ ಅಧಿಕಾರಿ ಈಶ್ವರ ಪ್ರಸನ್ನ, ನಗರ ಯೋಜನೆ ಸಹಾಯಕ ನಿರ್ದೇಶಕ ಎಂಎನ್ ದೇವರಾಜು ಈ ಅಧಿಕಾರಿಗಳ ಮೇಲೆ ಮೊಕ್ಕದಮ್ಮೆ ದಾಖಲಿಸಲು ಎಸಿಬಿ ಸರ್ಕಾರದ ಅನುಮತಿ ಕೊರಿದ್ದು ಇದುವರೆಗು ಅನುಮತಿ ಸಿಕ್ಕಿಲ್ಲ.

ಟಿಡಿ ಆರ್ ಹಗರಣದ ತನಿಖೆ ನಡೆಸುತ್ತಿರುವ ಎಸಿಬಿ ಒಂದಲ್ಲ ಮೂರು ಬಾರಿ ಸರ್ಕಾರಕ್ಕೆ ಅನುಮತಿಗಾಗಿ ಕಡತ ಕಳುಹಿಸಿದೆ ಸರ್ಕಾರ ಅನುಮತಿ ನೀಡದೆ ಕಡತವನ್ನ ವಾಪಸ್ಸು ಕಳುಹಿಸಿದೆ. ಇದರಿಂದ ಟಿ ಡಿ ಆರ್ ಹಗರಣದ ತನಿಖೆಗೆ ಹಿನ್ನಡೆಯಾಗುತ್ತಿದೆ.

ಈ ಹಗರಣದಲ್ಲಿ ಬಿಡಿಎ ಇಂಜಿನಿಯರ್ ಕೃಷ್ಣಲಾಲ್ ,ಜೊತೆಗೆ ರಸ್ತೆ ಮೂಲಭೂತ ಸೌಕರ್ಯ ಸಹಾಯಕ ನಿವೃತ್ತ ಕೆ.ಎನ್ ರಮೇಶ್ ಮೇಲೆ ಮಾತ್ರ ಸರ್ಕಾರ ಪ್ರಕರಣ ದಾಖಲಿಸಿ ದಾಳಿ ನಡೆಸಲು ಎಸಿಬಿಗೆ ಅನುಮತಿ ನಿಡಿದೆ. ಆದರೆ ಉಳಿದ ನಿವೃತ್ತ ಹಾಗೂ ಅಧಿಕಾರಿಗಳ ಮೇಲೆ ದಾಳಿ‌ಮಾಡಲು ಅನುಮತಿ ನೀಡದೆ ಇರುವ ಸರ್ಕಾರದ ನಡೆ ಅನುಮಾನ ಹುಟ್ಟಿಸುವಂತಿದೆ.

ಇಬ್ಬರು ಹಾಲಿ ಅಧಿಕಾರಿಗಳು ಐವರು ನಿವೃತ್ತ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಲು ಸರ್ಕಾರ ಅನುಮತಿ ನೀಡದೆ ಇರುವುದರ ಹಿಂದೆ ಮುಖ್ಯಮಂತ್ರಿಗಳಿಗೆ ಆಪ್ತರಾದ ಪ್ರಭಾವ ಶಾಲಿ ಸಚಿವರೊಬ್ಬರ ಕೈವಾಡ ಇದೆ ಎಂದು ಶಂಕಿಸಲಾಗುತ್ತಿದೆ.

ಎಸಿಬಿಯು ಈಗಾಗಲೇ ಟಿ ಡಿಆರ್ ಹಗರಣ ಕುರಿತಂತೆ ಕೃಷ್ಣಲಾಲ್ ಹಾಗೂ ಆತನ ಆಪ್ತರ ಮೇಲೆ ದಾಳಿ‌ನಡೆಸಿ ಕೆಲ ದಾಖಲೆ ಕ್ರೋಢೀಕರಿಸಿದ್ದಾರೆ. ಆದರೆ ತನಿಖೆ ಪೂರ್ಣವಾಗಿ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಸಿಗದೇ ಇರುವುದು ಎಸಿಬಿ ಅಧಿಕಾರಿಗಳಿಗೆ ಬಹಳ ಹಿನ್ನಡೆಯಾಗಿದೆ ಎಂದು ಈ ಟಿವಿ ಭಾರತ್ಗೆ ಎಸಿಬಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.Body:KN_BNG_08_3_TDR_7204498Conclusion:KN_BNG_08_3_TDR_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.