ETV Bharat / state

ಶಾಸಕ ಬಂಡೆಪ್ಪ ಕಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ಯುವಕರು

ಬೀದರ್​ನಲ್ಲಿ ಪಕ್ಷ ಬಲವರ್ಧನೆ ಪಣ-ಶಾಸಕ ಬಂಡೆಪ್ಪ ಕಾಶೆಂಪುರ್​ ಸಮ್ಮುಖದಲ್ಲಿ ರೇಕುಳಗಿ ಗ್ರಾಮದ ಯುವಕರು ಜೆಡಿಎಸ್ ಸೇರ್ಪಡೆ- ಯುವಕರಿಗೆ ಜೆಡಿಎಸ್​ ಮೇಲೆ ವಿಶ್ವಾಸವಿದೆ ಎಂದ ಮಾಜಿ ಸಚಿವ

youths-joined-jds-in-the-presence-of-mla-bandappa-kashempur
ಶಾಸಕ ಬಂಡೆಪ್ಪ ಕಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ಯುವಕರು
author img

By

Published : Jan 1, 2023, 4:39 PM IST

ಬೀದರ್ : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೇಕುಳಗಿ ಗ್ರಾಮದ ಯುವಕರು ಮಾಜಿ ಸಚಿವ,ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಯುವಕರಿಗೆ ಬಂಡೆಪ್ಪ ಕಾಶೆಂಪುರ್ ಅವರು ಜೆಡಿಎಸ್ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಪಕ್ಷ ಸಂಘಟನೆ, ಬಲವರ್ಧನೆ, ಚುನಾವಣೆ ಸಿದ್ಧತೆ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ನೂತನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಕಾಶೆಂಪುರ್ ಅವರು, ವಿವಿಧ ಪಕ್ಷಗಳ ಯುವಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಯುವಕರು ಜೆಡಿಎಸ್ ಮೇಲೆ ವಿಶ್ವಾಸ ಇರಿಸಿದ್ದಾರೆ. ನಮ್ಮ ಪಕ್ಷ ಬಡವರ, ರೈತರ, ಶ್ರಮಿಕರ ಪರವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಘಟನೆ, ಬಲವರ್ಧನೆಗಾಗಿ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆಕೊಟ್ಟರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರಾಜಕುಮಾರ ಮಂದಾ ಬೋರಾಳ, ಶರಣಪ್ಪ ಕಾಶೆಂಪುರ್, ಶಿವರಾಜ ಔಂಟಿ ಬಂಬಳಗಿ, ನೂತನ ಕಾರ್ಯಕರ್ತರಾದ ಈರಪ್ಪ ಕಾರ್ಲ್, ದಯಾನಂದ ಮುಸ್ತರಿ, ಅಶೋಕ ಪೈಸೆ, ಗಣಪತಿ ಪೆಲಕಪಳ್ಳಿ, ಗಣಪತಿ ತಾಳಾ, ವಿಜಯಕುಮಾರ್, ಹನುಮಂತ ನೀಲಾ, ಶಿವಾನಂದ ತುಮ್ಮನಪಳ್ಳಿ, ನಾರಾಯಣ್ ಪೈಸೆ, ಸತೀಶ್ ಪೈಸೆ, ಮಲ್ಲಪ್ಪ ಹುದಲೂರು, ಪ್ರಭು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : 123 ಸ್ಥಾನ ಗೆದ್ದು ಜೆಡಿಎಸ್​ ಶಕ್ತಿ ತೋರಿಸುತ್ತೇವೆ: ಹೆಚ್​ಡಿಕೆ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.