ಬೀದರ್: ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿದ ವಿದ್ಯಾರ್ಥಿನಿಯರಿಬ್ಬರು ಅಸ್ವಸ್ಥರಾದ ಘಟನೆ ನಡೆದಿದೆ.
ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿ ಗ್ರಾಮದ ಅಂಬೇಡ್ಕರ್ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು ಮಾಡಲಾಗಿತ್ತು. ಉಪಹಾರ ಸೇವಿಸಿದ ನಂತರ ಬಾಲಕಿಯರಿಗೆ ವಾಂತಿ, ಭೇದಿಯಾಗಿದೆ.
ಅಸ್ವಸ್ಥರಾದ ಮಕ್ಕಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆಹಾರ ಪದಾರ್ಥದಲ್ಲಿ ಹುಳುಗಳಿದ್ದವು ಎನ್ನಲಾಗಿದೆ. ಹಾಗಾಗಿ ವಸತಿ ಶಾಲೆ ವಾರ್ಡನ್ ಗೋವಿಂದ ಪಾಟೀಲ್ ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರು ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.