ಬೀದರ್: ಬೀದರ್-ಕಲ್ಬುರ್ಗಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಕಾರೊಂದರಲ್ಲಿ ಒಂದು ಕ್ವಿಂಟಲ್ ಗಾಂಜಾ ಪತ್ತೆಯಾಗಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿಯ ಬೀದರ್-ಕಲ್ಬುರ್ಗಿ ಹೆದ್ದಾರಿ ಪಕ್ಕದ ರವಿ ದಾಬಾ ಬಳಿ ಟಯರ್ ಪಂಕ್ಚರ್ ಆದ ಕಾರೊಂದು ನಿಂತಿತ್ತು. ಅನುಮಾನಗೊಂಡ ಸ್ಥಳೀಯರು, ಹಳ್ಳಿಖೇಡ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪಿಎಸ್ಐ ಮಹಾಂತೇಶ, ಕಾರು ಪರಿಶೀಲನೆ ಮಾಡಿದಾಗ ಒಂದು ಕ್ವಿಂಟಲ್ ಗಾಂಜಾ ಪತ್ತೆಯಾಗಿದೆ. ಈ ಕುರಿತು ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.