ಬೀದರ್: ಇಲ್ಲಿನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ಕೈ ಕೊಟ್ಟ ಪರಿಣಾಮ ರೋಗಿಗಳು ಹಾಗೂ ಸಿಬ್ಬಂದಿ ಬಹುಮಹಡಿ ಕಟ್ಟಡದಲ್ಲಿ ಆರೋಗ್ಯ ಸೇವೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷವಷ್ಟೇ ಹೊಸದಾಗಿ ನಿರ್ಮಾಣವಾದ ಜಿಲ್ಲಾಸ್ಪತ್ರೆಯಲ್ಲಿ ಲಿಫ್ಟ್ ಅವಾಂತರ ನಡೆಯುತ್ತಲೆ ಇದೆ. ಒಟ್ಟು ಆರು ಮಹಡಿಯ ಕಟ್ಟಡದ ಒಂದೊಂದು ಅಂತಸ್ಥಿನಲ್ಲೂ ಒಂದೊಂದು ಬಗೆಯ ಆರೋಗ್ಯ ಸೇವೆ ಒದಗಿಸಲಾಗಿದೆ. ಈಗ ಲಿಫ್ಟ್ ಕೆಟ್ಟು ಚಿಕಿತ್ಸೆಗೆ ಬಂದ ರೋಗಿಗಳು, ಹೆರಿಗೆಗೆ ಬಂದ ಬಾಣಂತಿಯರು, ಅಷ್ಟೇ ಯಾಕೆ ಬ್ರೀಮ್ಸ್ನ ಸಿಬ್ಬಂದಿ ಕೂಡ ಸಮಸ್ಯೆ ಎದುರಿಸುವಂತಾಗಿದೆ.
6 ಮಹಡಿ ಕಟ್ಟಡವನ್ನು ಮೆಟ್ಟಿಲು ಮೂಲಕ ಹತ್ತಿ ಚಿಕಿತ್ಸೆ ಪಡೆಯುವ ದುಃಸ್ಥಿತಿ ರೋಗಿಗಳಿಗೆ ಎದುರಾಗಿದೆ. ಬ್ರೀಮ್ಸ್ ಆಸ್ಪತ್ರೆಯ ಈ ದುರಾವಸ್ಥೆ ಕಂಡು ಆಡಳಿತ ಮಂಡಳಿ ವಿರುದ್ಧ ರೋಗಿಗಳು ಹಿಡಿಶಾಪ ಹಾಕುತ್ತಿದ್ದಾರೆ.