ಬೀದರ್: ಪರಿಸರ ರಕ್ಷಣೆ ಹಾಗೂ ಜಲ ಸಂಪನ್ಮೂಲ ವೃದ್ಧಿ ಕುರಿತು ಮಹಾರಾಷ್ಟ್ರದ ಉದಗಿರ ನಗರದ ಯುವಕರ ತಂಡವೊಂದು ದೇಶಾದ್ಯಂತ ಸೈಕಲ್ ಸವಾರಿ ನಡೆಸಿ ಗಮನ ಸೆಳೆಯುತ್ತಿದೆ.
ಜಿಲ್ಲೆಯಾದ್ಯಂತ ಸೈಕಲ್ ಸವಾರಿ ಮಾಡಿರುವ ಯುವಕರ ತಂಡ ಪರಿಸರ ರಕ್ಷಣೆ, ಸಸಿಗಳ ನೆಡುವಿಕೆ, ನೀರು ಸಂಪನ್ಮೂಲ ಸದ್ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಈ ಹಿಂದೆ ಗುರಜಾತ್ನ ಸ್ಟ್ಯಾಚು ಆಫ್ ಯುನಿಟಿವರೆಗೆ ಆಂಧ್ರ ಪ್ರದೇಶದ ತಿರುಪತಿ ಹಾಗೂ ರಾಮೇಶ್ವರದವರೆಗೆ ಸೈಕ್ಲಿಂಗ್ ನಡೆಸಿರುವ ತಂಡ, ಇದೀಗ ಬರಪೀಡಿತ ಪ್ರದೇಶಗಳಲ್ಲಿ ಜಾಗೃತಿ ನಡೆಸಿ ಗಮನ ಸೆಳೆದಿದ್ದಾರೆ.
ಈ ತಂಡ ಹೊದಲ್ಲೆಲ್ಲಾ ಸಾರ್ವಜನಿಕರಿಂದ ಗೌರವ ಸಿಗ್ತಿದ್ದು, ಇವರು ಹೇಳುವ ಮಾತುಗಳಿಗೆ ಪ್ರಭಾವಿತರಾಗ್ತಿದ್ದಾರೆ. ಹೀಗಾಗಿ ನಮ್ಮ ಸೈಕಲ್ ಜಾಥಾ ಫಲ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.