ಬೀದರ್: ಈಶಾನ್ಯ ಸಾರಿಗೆ ಸಂಸ್ಥೆಯ ಭಾಲ್ಕಿ ಘಟಕದಲ್ಲಿ ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಡೀಸೆಲ್ ಕಳ್ಳತನ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಿಬ್ಬಂದಿ ಬೇಜವಾಬ್ದಾರಿತನ ಗೊತ್ತಾಗಿದ್ದು, 7 ಜನರನ್ನ ಅಮಾನತುಗೊಳಿಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಘಟಕದ ಪ್ರಭಾರಿ ವ್ಯವಸ್ಥಾಪಕ ಮಹ್ಮದ್ ಇಸಾಕ್, ಸಹಾಯಕ ಕಾರ್ಯ ಅಧೀಕ್ಷಕ ಎಸ್.ಟಿ. ರಾಥೋಡ್, ಪಾರುಪತ್ತೇಗಾರ ಸಂತೋಷ, ಡೇಟಾ ಎಂಟ್ರಿ ಆಪರೇಟರ್ ಜಿತೇಂದ್ರ, ಪ್ರಭಾರಿ ಲೆಕ್ಕಪತ್ರ ಮೇಲ್ವಿಚಾರಕ ಮಹೇಶ, ತಾಂತ್ರಿಕ ಸಹಾಯಕ ಬಸವರೆಡ್ಡಿ ಹಾಗೂ ಭದ್ರತಾ ಸಿಬ್ಬಂದಿ ಶಿವಕುಮಾರ ಅಮಾನತುಗೊಂಡ ಸಿಬ್ಬಂದಿ
ಜುಲೈ 1ರಂದು ಭಾಲ್ಕಿ ಘಟಕದ ಬಂಕ್ನಲ್ಲಿ 2,488 ಲೀಟರ್ ಡೀಸೆಲ್ ವ್ಯತ್ಯಾಸ ಕಂಡು ಬಂದಿತ್ತು. ಇದರಿಂದ ಸಂಸ್ಥೆಗೆ 1.48 ಲಕ್ಷ ರೂ. ನಷ್ಟ ಉಂಟಾಗಿತ್ತು. ತನಿಖೆ ನಡೆಸಿ ವರದಿ ತಯಾರಿಸಿದ ಅಧಿಕಾರಿಗಳು ಡಿಸೇಲ್ ಕಳವು ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಪರಿಣಾಮ 7 ಮಂದಿ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ, ತಕ್ಷಣವೆ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.